ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯ ಜಾರಿ : ಸಚಿವ ನಾಗೇಶ್ – Vishwanews24
ಪ್ರಸ್ತುತ ಇರುವ ಪಠ್ಯದಲ್ಲಿ ಇತಿಹಾಸದ ಬಗ್ಗೆ ಒಂದಷ್ಟು ತಪ್ಪುಗಳು ಆಗಿದ್ವು, ಅವುಗಳನ್ನ ಸರಿ ಮಾಡುವ ಕೆಲಸ ಮಾಡಿದ್ದೇವೆ..
ಬೆಂಗಳೂರು : ಶಿಕ್ಷಣ ಇಲಾಖೆಯು ಪಠ್ಯ ಬದಲಾವಣೆಗೆ ತಯಾರಿ ಮಾಡಿಕೊಂಡಿದ್ದು, ಪರಿಷ್ಕೃತ ಪಠ್ಯ ಜಾರಿಗೊಳಿಸಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ಪ್ರಸ್ತುತ ಇರುವ ಪಠ್ಯದಲ್ಲಿ ಇತಿಹಾಸದ ಬಗ್ಗೆ ಒಂದಷ್ಟು ತಪ್ಪುಗಳು ಆಗಿದ್ವು, ಅವುಗಳನ್ನ ಸರಿ ಮಾಡುವ ಕೆಲಸ ಮಾಡಿದ್ದೇವೆ. ಮುಂದಿನ ಅಕಾಡೆಮಿ ಒಳಗಡೆ ಪರಿಷ್ಕೃತ ಪಠ್ಯ ಪುಸ್ತಕಗಳು ಮಕ್ಕಳಿಗೆ ಸಿಗಲಿದೆ. ಸಮಿತಿಯ ವರದಿಯನ್ನು ಗಮನದಲ್ಲಿಟ್ಕೊಂಡು ಪಠ್ಯ ಪರಿಷ್ಕರಣೆ ಆಗಲಿದೆ ಎಂದರು.
ಇನ್ನು ರಾಜಕೀಯ ಉದ್ದೇಶ ಇಟ್ಟುಕೊಂಡು ನಾವು ಪಠ್ಯ ಪರಿಷ್ಕರಣೆ ಮಾಡಿಲ್ಲ. ಪೂರ್ಣವಾಗಿ ಪಠ್ಯ ಪರಿಷ್ಕರಣೆ ಮಾಡುತ್ತಿಲ್ಲ, ಪಠ್ಯ ಪುಸ್ತಕದಲ್ಲಿದ್ದ ತಪ್ಪುಗಳನ್ನ ಸರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಮಕ್ಕಳಿಗೆ ನಮ್ಮ ಭಾರತದ ಇತಿಹಾಸ, ಭಾರತದ ವಿಜ್ಞಾನದ ಬಗ್ಗೆ ನಿಜವಾದ ಅಂಶಗಳನ್ನು, ಮೌಲ್ಯಗಳನ್ನು ಕೊಡುವಂತ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮಂಗಳೂರು : ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ ; ನಾಲ್ವರು ಅರೆಸ್ಟ್ – Vishwanews24
