ಮುಂಬೈ: ಶಾಲಾ ಪ್ರವಾಸಕ್ಕೆ ತೆರಳಿದ್ದ ಮಕ್ಕಳ ಬಸ್ ಪಲ್ಟಿ – ಇಬ್ಬರು ವಿದ್ಯಾರ್ಥಿಗಳು ಮೃತ್ಯು – Vishwanews24
ಮುಂಬೈ: ಶಾಲಾ ಪ್ರವಾಸಕ್ಕೆ ತೆರಳಿದ್ದ ಮಕ್ಕಳ ಬಸ್ ಪಲ್ಟಿ – ಇಬ್ಬರು ವಿದ್ಯಾರ್ಥಿಗಳು ಮೃತ್ಯು
ಮುಂಬೈ: ಮುಂಬೈ ಬಳಿ ಇಂದು ಬೆಳಗಿನ ಜಾವ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾದ ಪರಿಣಾಮ ಕೋಚಿಂಗ್ ಸೆಂಟರ್ ನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಮುಂಬೈನ ಚೆಂಬೂರ್ ನಲ್ಲಿರುವ ಕೋಚಿಂಗ್ ಸೆಂಟರ್ ನ 48 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಪ್ರವಾಸಕ್ಕೆ ತೆರಳಿದ್ದು, ವಾಪಸ್ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಇನ್ನು ಮುಂಬೈ – ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ರಾಯಗಢ ಜಿಲ್ಲೆಯ ಖೋಪೋಲಿ ಬಳಿ ಬಸ್ ಪಲ್ಟಿಯಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.
ಮ್ಯಾಂಡಸ್ ಚಂಡಮಾರುತ : ರಾಜ್ಯದಲ್ಲಿ ಇನ್ನೂ 3 ದಿನ ಮಳೆ, 15 ಜಿಲ್ಲೆಗಳಲ್ಲಿ `ಯಲ್ಲೋ ಅಲರ್ಟ್’ ಘೋಷಣೆ – Vishwanews24
