ಮುಂಬೈ: ಹಿಂದೂಸ್ತಾನದಲ್ಲಿ ಕೇಸರಿ ಆಳ್ವಿಕೆ ನಡೆಸುತ್ತದೆ : ದೇವೇಂದ್ರ ಫಡ್ನವೀಸ್ – Vishwanews24
ಮುಂಬೈ: ಹಿಂದೂಸ್ತಾನದಲ್ಲಿ ಕೇಸರಿ ಆಳ್ವಿಕೆ ನಡೆಸುತ್ತದೆ : ದೇವೇಂದ್ರ ಫಡ್ನವೀಸ್ – Vishwanews24
ಮುಂಬೈ: ಹಿಂದೂಸ್ತಾನದಲ್ಲಿ ಕೇಸರಿ ಆಳ್ವಿಕೆ ನಡೆಸುತ್ತದೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಪಕ್ಷದ ಮಹಾಸಂಕಲ್ಪ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದ ಅವರು, ನಿಮ್ಮ ಅಧಿಕಾರ ಬಲದಿಂದ ಸ್ಥಾಪಿಸಿದ ಬಾಬ್ರಿ ಸಂರಚನೆಗಳನ್ನು ಉರುಳಿಸುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಾವು ಕೇವಲ ಹನುಮಾನ್ ಚಾಲೀಸಾವನ್ನು ಜಪಿಸಿದ್ದೇವೆ. ಬಾಳಾಸಾಹೇಬ್ ಠಾಕ್ರೆ ಅವರು ತಮ್ಮ ಮಗನಿಗೆ ಹನುಮಾನ್ ಚಾಲೀಸಾವನ್ನು ಓದುವುದು ದೇಶದ್ರೋಹ, ಆದರೆ ಔರಂಗಜೇಬನ ಸಮಾಧಿಗೆ ಭೇಟಿ ನೀಡುವುದು ರಾಜ್ಯ ಶಿಷ್ಟಾಚಾರ ಎಂದು ಹೇಳಿಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಶಿವಸೇನೆ ನಡೆಸಿದ ರ್ಯಾಲಿಯನ್ನು ಮಾಸ್ಟರ್ ಸಭೆ ಎಂದು ಕರೆದ ಅವರು, ನಿನ್ನೆ ನಡೆದಿದ್ದು ಕೌರವರ ಸಭೆ, ಆದರೆ ಇಂದು ನಡೆಯುತ್ತಿರುವುದು ಪಾಂಡವರ ಸಭೆಯಾಗಿದೆ. ಉದ್ಧವ್ ಠಾಕ್ರೆ ಅವರು ನಡೆಸಿದ ರ್ಯಾಲಿ ನಗೆ ತರಿಸುವಂತಿತ್ತು ಎಂದಿದ್ದಾರೆ.
