ಮುನಿಯಾಲ್ ಉದಯ್ ಶೆಟ್ಟಿ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ…?
ಮುನಿಯಾಲ್ ಉದಯ್ ಶೆಟ್ಟಿ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ…?
ಕಾರ್ಕಳ: ಇನ್ನೂ ಕೆಲವೆ ತಿಂಗಳಲ್ಲಿ ಇಡೀ ರಾಷ್ಟ್ರ ರಾಜಕಾರಣದ ಕಾವು ಶುರುವಾಗಲಿದೆ ಅದರ ನಡುವಲ್ಲಿ ಆಯಾ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯು ಸಿದ್ಧವಾಗ್ಲಿದೆ ಇದರ ನಡುವೆ ಕರಾವಳಿ ಭಾಗದ ಮಂಗಳೂರು ಮತ್ತು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಯಾರಾಗಬಹುದೆಂಬ ಚರ್ಚೆಯೂ ಭಾರಿ ಜೋರಾಗಿಯೇ ನಡೆಯುತ್ತಿದೆ.ಅಂದಾ ಹಾಗೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೈಪಾಲಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಹೆಸರು ಮುನಿಯಾಲ್ ಉದಯ್ ಶೆಟ್ಟಿಯವರದ್ದು.
ಹೌದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದ ಶೆಟ್ರು ಕಡೆ ಹೈಕಾಮಂಡ್ ಮಾತಿಗನುಸರವಾಗಿ ಗೋಪಾಲ ಭಂಡಾರಿಯವರಿಗೆ ಸೀಟ್ ಬಿಟ್ಟುಕೊಡಬೇಕಾಯಿತು. ಆ ಸಮಯದಲ್ಲಿ ಈಡೀ ಕಾರ್ಕಳದ ಒಂದಿಷ್ಟು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಿದ ವಿಚಾರ ಸರ್ವೆ ಸಾಮಾನ್ಯವಾಗಿ ತಿಳಿದಿರುವಂತದು ಕಡೆಗೆ ಮುನಿಯಾಲ್ ಉದಯ್ ಶೆಟ್ಟಿ ಮಾತಿಗೆ ಬೆಲೆ ಕೊಟ್ಟು ಅಭಿಮಾನಿಗಳು ಪ್ರತಿಭಟನೆಯಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿ ಪರ ಫೀಲ್ಡ್ ಗೆ ಇಳಿದು ಕೆಲಸ ಮಾಡಿದ್ದರು.
ಭಾರಿ ದೊಡ್ಡ ಮಟ್ಟದ ಯುವ ಪಡೆ ಹಾಗೂ ಮಹಿಳಾಮಣಿಗಳ ಮತ್ತು ಅಭಿಮಾನಿಗಳ ತಂಡವಿರುವ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಯ ಹೆಸರು ಉಡುಪಿ ಚಿಕ್ಕಮಗಳೂರಿನ ಲೋಕಸಭಾ ಅಭ್ಯರ್ಥಿ ಎಂಬ ವಿಚಾರ ಮತ್ತೆ ಭಾರಿ ಸಂಚಲನ ಉಂಟು ಮಾಡುತ್ತಿದೆ.
ಸಜ್ಜನರಾಗಿ ಸದಾ ಹಸನ್ಮುಕಿಯಿಂದ ಬಡವ ಬಲ್ಲಿದರ ಸೇವೆ ಮಾಡುತ್ತ, ಹಿರಿಯ ಕಿರಿಯರನ್ನ ಗೌರವಿಸುತ್ತ ತಮ್ಮ ಟ್ರಸ್ಟ್ ಹಾಗೂ ವೈಯಕ್ತಿಕವಾಗಿ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನ ರಾಜ್ಯಮಟ್ಟದಲ್ಲಿ ಮಾಡಿ ಅಪಾರ ಜನ ಪ್ರೀತಿ ಸಂಪಾದಿಸಿದ ಮುನಿಯಾಲ್ ಮುಂದಿನ ಸಂಸದರಾಗಬೇಕೆಂಬ ಒಕ್ಕೊರಲಿನ ಅಭಿಪ್ರಾಯ ಜನಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದೆ.
ಇದರ ನಡುವೆ ಜನರ ಕೈಗೆ ಸಿಗದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಠಾವೋ ಎಂಬ ಮಾತು ಪ್ರತಿಯೊಬ್ಬರ ಬಾಯಿಯಿಂದ ಹೊರು ಬರುತ್ತಿವಂತೆ ಮುನಿಯಾಲ್ ಸಂಸದರಾದರೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬಹುದೆಂಬ ನಂಬಿಕೆ ಜನಸಾಮಾನ್ಯರಲ್ಲಿ ಗಟ್ಟಿಯಾಗಿ ಬೇರೂರಿದ್ದು ಉದಯಣ್ಣ ನಮ್ಮ ಎಂಪಿ ಎಂಬ ಮಾತು ಮನೆಮನೆಯ ಮತದಾರರಿಂದ ಕೇಳಿ ಬರುತ್ತಿದೆ.ಇನ್ನೂ ವಿನಯ್ ಕುಮಾರ್ ಸೊರಕೆ,ಪ್ರಮೋದ್ ಮಧ್ವರಾಜ್ ಹೆಸರು ಚಾಲ್ತಿಯಲ್ಲಿದ್ದರೂ ಉದಯ್ ಶೆಟ್ಟಿ ಹೆಸರೂ ಭಾರಿ ರೇಸ್ ನಲ್ಲಿರುವುದಂತು ಸತ್ಯ.
ಜಾತಿ ಲೆಕ್ಕಾಚಾರದ ಪ್ರಕಾರ ಸೀಟ್ ನೀಡುವುದಾದರು ಬಂಟ ಸಮುದಾಯ ಬಲಿಷ್ಠ ನಾಯಕನಾಗಿ ಹೊರ ಹೊಮ್ಮಿದ ವ್ಯಕ್ತಿ ಜನಸಾಮಾನ್ಯರ ಜತೆ ಸೇರಿಕೊಂಡು ಜಾತ್ಯತೀತ ನಾಯಕನಾಗಿ ಮಿಂಚುತ್ತಿದ್ದಾರೆ.ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೂ ಪಕ್ಷ ನಿಷ್ಠೆ ಬಿಡದೆ ಅವಿರತವಾಗಿ ಪಕ್ಷ ಸಂಘಟನೆಯಲ್ಲಿ ದೊಡಗಿಸಿಕೊಂಡು ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನ ಭಧ್ರವಾಗಿದೆ.ತಳಮಟ್ಟದ ಸಾಮಾನ್ಯ ಕಾರ್ಯಕರ್ತನ ಅಳಲನ್ನು ಅತ್ಯಂತ ಹತ್ತಿರದಿಂದ ಮನಗಂಡ ಏಕೈಕ ನಾಯಕ ಎಂಬ ಮಾತು ಪಕ್ಷದಲ್ಲಿಯೇ ಕೇಳಿಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಮುನಿಯಾಲ್ ಹವಾ ಈಗಾಗಲೇ ಶುರುವಾಗಿದ್ದು #uday Shetty mp ಎಂಬ ಆ್ಯಶ್ ಟ್ಯಾಗ್ ಶುರುವಾಗಿದ್ದು.ನಮ್ಮ ಸಂಸದ ಮುನಿಯಾಲ್ ಉದಯ್ ಶೆಟ್ಟಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿಯೂ ಯುವಕರು ಶುರುಮಾಡಿಕೊಂಡಿರುವುದು ಮತ್ತಷ್ಟು ಪುಷ್ಟಿ ತಂದುಕೊಟ್ಟಿದೆ.

ಹಳ್ಳಿಯಿಂದ ದಿಲ್ಲಿಯವರೆ ಸಜ್ಜಾಗಿ ನಿಂತ ಮುನಿಯಾಲ್ ಅಭಿಮಾನಿ ಬಳಗ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಳು ಅಭಿಮಾನಿಗಳು ಒತ್ತಾಯಿಸಿದ್ದರು ಕೂಡ ಪಕ್ಷ ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಹಿಂದೆ ಸರಿದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಶೆಟ್ರ ಅಭಿಮಾನಿ ಬಳಗ ಹಳ್ಳಿಯಿಂದ ದಿಲ್ಲಿಯವರೆಗೂ ಅಲರ್ಟ್ ಆಗಿದ್ದಾರೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುನಿಯಾಲ್ ಸೀಟ್ ಪಕ್ಕಾ ಅಂದ್ರೆ ಬೆಂಗಳೂರು, ಮುಂಬಯಿ, ಗುಜರಾತ್, ದೆಹಲಿ ನಾನಾ ಕಡೆ ಕಾರ್ಯನಿಮಿತ್ತವಿರುವ ಯುವಕರು ಕಾಂಗ್ರೆಸ್ ಪರ ಫೀಲ್ಡ್ ಗೆ ಇಳಿಯುವುದರಲ್ಲಿ ಅನುಮಾನವಿಲ್ಲ ಅನ್ನುತ್ತಾರೆ ಅಭಿಮಾನಿಯೊಬ್ಬರು.
ಸೋಲು ಗೆಲುವು.
ಕಳೆದ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿ ಓಟ್ ಗಿಟ್ಟಿಸಿಕೊಂಡಿದ್ದ ಶೋಭಾ ಕರದ್ಲಾಂಜೆ ಕಳೆದ ಐದು ನಾಲ್ಕುವರೆ ವರ್ಷದಲ್ಲಿ ಬರೊಬ್ಬರಿ ಹತ್ತರಿಂದ ಹದಿನೈದು ಭಾರಿ ಕ್ಷೇತ್ರ ಭೇಟಿ ಮಾಡಿರಬಹುದು .ಜನಸಾಮಾನ್ಯರಿಗೆ ಮಾತ್ರವಲ್ಲದೆ ಕಾರ್ಯ ಕರ್ತರಿಗೂ ಸಂಸದೆ ಟಿವಿ ಪತ್ರಿಕೆಯ ಮೂಲ ಕಾಣ ಬಹುದಾದ ಪರಿಸ್ಥಿತಿ ಇರುವುದರಿಂದ ಮುಂದಿನ ಸಲ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲ್ ಗೆ ಜಾತಿ ಬಲ , ಸಂಘಟನಾ ಶಕ್ತಿ, ಆರ್ಥಿಕವಾಗಿ ಬಲಾಡ್ಯರಾಗಿರುವುದರಿಂದ ಗೆಲುವು ಸುಲಭವಾಗಬಹುದು ಅನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಒಟ್ಟಾರೆಯಾಗಿ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಯಾರಿಗೆ ಬಿ ಫಾರ್ಮ್ ಕೊಡುತ್ತೆ, ಸಂಸದರು ಯಾರಗಬಹುದೆಂಬ ಕೂತುಹಲ ಜನಸಾಮಾನ್ಯರಲ್ಲಿ ಮೂಡಿದೆ.
ಬ್ಯೂರೊ ರಿಪೋರ್ಟ್.
ವಿಶ್ವ ನ್ಯೂಸ್ 24 ಕಾರ್ಕಳ
