ಮುಲ್ಕಿ : ಅಪ್ರಾಪ್ತ ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ : ಇಬ್ಬರು ಯುವಕರ ಬಂಧನ – vishwanews24

Featured, ದಕ್ಷಿಣ ಕನ್ನಡ

ಮುಲ್ಕಿ : ಅಪ್ರಾಪ್ತ ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ : ಇಬ್ಬರು ಯುವಕರ ಬಂಧನ

ಮುಲ್ಕಿ: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಅಪ್ರಾಪ್ತ ಬಾಲಕಿಗೆ ಆಮಿಷವೊಡ್ಡಿ, ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಡುಪಿಯ ಬಡಗುಬೆಟ್ಟುವಿನ ಬಸ್ ಕಂಡಕ್ಟರ್ ದೀಪಕ್ (19) ಮತ್ತು ಆತನ ಸ್ನೇಹಿತ, ಪರ್ಕಳ, ಅತ್ರಾಡಿ ನಿವಾಸಿ ನವೀನ್ ಶೆಟ್ಟಿ (21) ಎಂದು ಗುರುತಿಸಲಾಗಿದೆ.

ಕಾಂತಾರ ಚಾಪ್ಟರ್‌ 1 – ಅ. 2ರಂದು ವಿಶ್ವದಾದ್ಯಂತ ರಿಲೀಸ್  -vishwanews24

ಪೊಲೀಸರ ಪ್ರಕಾರ, ಆರೋಪಿಗಳು ಜುಲೈ 19 ರಂದು ಬಪ್ಪನಾಡು ಬಳಿಯಿಂದ ಸ್ಕೂಟರ್‌ನಲ್ಲಿ ಬಾಲಕಿಯನ್ನು ಅಪಹರಿಸಿ ಉಡುಪಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply