ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್  ನಟಿ ರಚಿತಾ ರಾಮ್ ಭೇಟಿ – Vishwanews24

Featured, ದಕ್ಷಿಣ ಕನ್ನಡ

ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್  ನಟಿ ರಚಿತಾ ರಾಮ್ ಭೇಟಿ – Vishwanews24

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನ ನಾಯಕಿ ನಟಿ ರಚಿತಾ ರಾಮ್ ಇಂದು ಭೇಟಿ ನೀಡಿದರು.

ದೇವಾಲಯಕ್ಕೆ ಭೇಟಿ ನೀಡಿದ ನಟಿಯನ್ನು ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರು ಗೌರವದಿಂದ ಬರಮಾಡಿಕೊಂಡರು. ತಾಯಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ಮನಸಾರೆ ಪ್ರಿಯೊಬ್ಬರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದೆ. ಪ್ರತೀ ವರ್ಷ ಇಲ್ಲಿನ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಜೊತೆಗೆ ಕರಾವಳಿ ಖಾದ್ಯಗಳು ನನಗೆ ತುಂಬಾ ಇಷ್ಟ ಎಂದರು.

ದೇವಳದ ಆಡಳಿತ ಮೊಕ್ತೇಸರ ಎನ್ .ಎಸ್ ಮನೋಹರ್ ಶೆಟ್ಟಿ, ಅರ್ಚಕ ನರಸಿಂಹ ಭಟ್ ಶಿವಶಂಕರ್ ವರ್ಮ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ನಾಗೇಶ್ ಬಪ್ಪನಾಡು ಉಪಸ್ಥಿತರಿದ್ದರು.

ಬೇರೆ ಧರ್ಮ ಸ್ವೀಕರಿಸುವವರಿಗೆ ಅವರ ಮೂಲ ಧರ್ಮದಲ್ಲಿ ಇದ್ದ ಹಕ್ಕು ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ : ಆರಗ ಜ್ಞಾನೇಂದ್ರ – Vishwanews24