ಮುಸ್ಲಿಮರಿಗೆ ತಾಕತ್ತಿದ್ದರೆ ನಿಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಸಿ : RSS ಮುಖಂಡ – Vishwanews24

Featured, ರಾಜ್ಯ ನ್ಯೂಸ್

ಮುಸ್ಲಿಮರಿಗೆ ತಾಕತ್ತಿದ್ದರೆ ನಿಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಸಿ : RSS ಮುಖಂಡ

ಯಾದಗಿರಿ: ತಾಕತ್ತಿದ್ದರೆ ಎಲ್ಲರಿಗೂ ಹಿಜಬ್ ತೊಡಿಸಿ ಎಂದು ಆರ್‍ಎಸ್‍ಎಸ್  ಮುಖಂಡ ಡಾ.ಹಣಮಂತ ಮಳಲಿ ಮುಸ್ಲಿಮರಿಗೆ ಸವಾಲೆಸೆದಿದ್ದಾರೆ.

ಯಾದಗಿರಿಯ ಸೈದಾಪುರದಲ್ಲಿ ಹಿಜಬ್  ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಸಿನಿಮಾ ನಟಿಯರಿಗೆ, ಶಾರೂಖ್ ಖಾನ್ ಮಗಳಿಗೆ ಹಿಜಬ್ ತೋಡಿಸೋಕೆ ಗಂಡಸ್ತನ ಇಲ್ವಾ..? ಬಡವರ ಮಕ್ಕಳಿಗೆ ಹಿಜಬ್ ಹಾಕಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದೀರಿ. ಕಾನೂನು ಪಾಲನೆ ಮಾಡಿ ಅಂತ ಕೋರ್ಟ್  ಹೇಳಿದೆ. ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ಹಿಜಬ್ ನಿಂದಾಗಿ ಹಿಂದೂಗಳು ಎಚ್ಚರ ಆಗಿದ್ದಾರೆ. ಹಿಜಬನ್ನು ಮನೆ ಅಥವಾ ಅವರ ಅಪ್ಪನ ಮುಂದೇನಾದರೂ ಹಾಕೊಳ್ಳಲಿ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಬ್ ಹಾಕಿಸಿ ಎಂದು ವಾಗ್ದಾಳಿ ನಡೆಸಿದರು.

ಉಡುಪಿ: ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ – Vishwanews24

ವ್ಯಾಪಾರಕ್ಕೆ ಮುಸಲ್ಮಾನರಿಗೆ ನಿರ್ಬಂಧಕ್ಕೆ ಹಣಮಂತ ಮಳಲಿ ಸಮರ್ಥನೆ ನೀಡಿದ್ದಾರೆ. ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ಮುಂದೆ ನಡೆಯಲ್ಲ. ಇದರಿಂದಾಗಿ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತೆ. ನೀವೇ(ಮುಸಲ್ಮಾನರೇ) ಹೇಳಿಕೊಟ್ಟಿದ್ದು ಹಿಂದೂಗಳ ಹತ್ರ ಖರೀದಿ ಮಾಡಬೇಡಿ ಅಂತ. ಮೊದಲು ಹೇಳಿಕೊಟ್ಟಿದ್ದು ನೀವೇ, ಈಗ ಹಿಂದೂಗಳು ಮಾಡ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.

ಕುಂದಾಪುರ: ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ – Vishwanews24

Leave a Reply