ಮೂಡಬಿದಿರೆ : ನೈತಿಕ ಪೊಲೀಸ್ ಗಿರಿಗೆ ಶಾಸಕ ಉಮಾನಾಥ ಕೋಟ್ಯಾನ್ ನೇರ ಬೆಂಬಲ : ಅಭಯಚಂದ್ರ ಜೈನ್ ಆರೋಪ – Vishwanews24

Featured, ದಕ್ಷಿಣ ಕನ್ನಡ

ಮೂಡಬಿದಿರೆ : ನೈತಿಕ ಪೊಲೀಸ್ ಗಿರಿಗೆ ಶಾಸಕ ಉಮಾನಾಥ ಕೋಟ್ಯಾನ್ ನೇರ ಬೆಂಬಲ : ಅಭಯಚಂದ್ರ ಜೈನ್ ಆರೋಪ – Vishwanews24

ಮೂಡಬಿದಿರೆ : ಮೂಡಬಿದಿರೆಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಆರೋಪಿಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಪ್ರಭಾವ ಬಳಿಸಿ ಬಿಡುಗಡೆಗೊಳಿಸಿದ್ದು, ಇದು ಹಾಲಿ ಶಾಸಕರು ನೈತಿಕ ಪೊಲೀಸ್ ಗಿರಿಗೆ ನೇರ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ ಆರೋಪಿಸಿದ್ದಾರೆ.

ಮೂಡಬಿದಿರೆಯಲ್ಲಿ ಮಾತನಾಡಿದ ಅವರು ಹಿಂದೂ ಮಹಿಳೆಯರಿಬ್ಬರು ಮುಸ್ಲಿಂ ದಂಪತಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆಂದು ಮಹಿಳೆಯರಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿಗಳನ್ನು ಸ್ವತಃ ಸ್ಥಳೀಯ ಹಾಲಿ ಶಾಸಕರು ಠಾಣೆಗೆ ತೆರಳಿ ತನ್ನ ಪ್ರಭಾವ ಬಳಸಿ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಆರೋಪಿ ಈ ಘಟನೆಯ ಪೋಟೋವನ್ನು ತನ್ನ ಸ್ಟೇಟಸ್‌ನಲ್ಲಿ ಹಾಕಿ ಸಂಭ್ರಮಿಸಿ ಕಾನೂನಿಗೆ ಸವಾಲೊಡ್ಡಿದ್ದಾರೆ ಎಂದು ದೂರಿದರು. ಈಗಿನ ಶಾಸಕರು ಬೆಂಬಲ ನೀಡುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಉಂಟಾಗಿದೆ ಎಂದರು.

ಈ ಬಗ್ಗೆ ಜಿಲ್ಲಾ ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗುವುದು. ಅಲ್ಲದೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರ ಮೂಲಕ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಉಚಿತವಾಗಿ ಕೋವಿಡ್–19 ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ : ರಾಮೇಶ್ವರ್ ತೆಲಿ – Vishwanews24