ಮೂಡುಬಿದಿರೆ : ಕನ್ನಡದ ಬಾವುಟದೊಂದಿಗೆ ಮರಳಿನಲ್ಲಿ ಅರಳಿದ ಪುನೀತ್ ಭಾವಚಿತ್ರ – Vishwanews24

Featured, ದಕ್ಷಿಣ ಕನ್ನಡ

ಮೂಡುಬಿದಿರೆ: ಮರಳಿನಲ್ಲಿ ಕನ್ನಡದ ಬಾವುಟದೊಂದಿಗೆ ಅರಳಿದ ಪುನೀತ್  ಭಾವಚಿತ್ರ – Vishwanews24

ಮೂಡುಬಿದಿರೆ: ಆಳ್ವಾಸ್‌ ಕಾಲೇಜಿನ ವಿಶುವಲ್‌ ಆರ್ಟ್‌ ಪದವಿ ವಿಭಾಗದ ಹಿರಿಯ ವಿದ್ಯಾರ್ಥಿ, ಹೊಸ ಬಗೆಯ ಕಲಾಕೃತಿಗಳನ್ನು ರಚಿಸಿ ಈಗಾಗಲೇ 3 ವಿಶ್ವದಾಖಲೆಗಳನ್ನು ನಿರ್ಮಿಸಿರುವ ತಿಲಕ್‌ ಕುಲಾಲ್‌ ಹಾಗೂ ಕಲಾವಿದರಾದ ರೋಹಿತ್‌ ನಾಯಕ್‌, ಅಕ್ಷಿತ್‌ ಕುಲಾಲ್‌ ಅವರು ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್‌ ವೇದಿಕೆಯಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ 30 ಅಡಿ ಉದ್ದ , 30 ಅಡಿ ಅಗಲದ ಕಲಾಕೃತಿಯನ್ನು ರಚಿಸಿದ್ದಾರೆ.

ಸುಮಾರು 3 ಗಂಟೆ ಸಮಯದಲ್ಲಿ 80 ಕೆಜಿ ಇದ್ದಿಲು, 90 ಕೆಜಿ ಮರಳು, ರಂಗೋಲಿ ಹುಡಿಯ ಬಳಕೆಯೊಂದಿಗೆ ಈ ಕಲಾಕೃತಿ ಮೂಡಿಬಂದಿದೆ. ಕನ್ನಡದ ಮಹತ್ವ ಸಾರುವ ಹಳದಿ ಕೆಂಪು ಬಣ್ಣದ ಬಾವುಟವನ್ನು ಚಿತ್ರಿಸಿರುವುದು ಗಮನಾರ್ಹವಾಗಿದೆ.

ಶುಕ್ರವಾರದಿಂದ 3 ದಿನಗಳ ಕಾಲ ಈ ಕಲಾಕೃತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ. ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್‌ ಆಳ್ವ ಪೂರಕ ಸಹಕಾರ ನೀಡಿದ್ದು, ಮೂಡುಬಿದಿರೆ ಪೋಲಿಸ್‌ ಸಬ್‌ ಇನ್‌ಸ್ಪೆಕ್ಟರ್‌ ಸುದೀಪ್‌ ಕಲಾಕೃತಿಯನ್ನು ವೀಕ್ಷಿಸಿ ಶ್ಲಾಘಿಸಿದರು.

ಮಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಹಿಜಾಬ್‌ನಂತಹ ವಿವಾದಕ್ಕೆ ಆಸ್ಪದವಿಲ್ಲ : ನಳಿನ್‌ಕುಮಾರ್ ಕಟೀಲ್‌ – VIshwanews24

Leave a Reply