ಮೂಳೂರು ಕಲ್ಲಿದ್ದಲು ಲೋಡ್ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ-ಹೈವೆ ಪಟ್ರೋಲ್ ಪೋಲಿಸರ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ.vishwanews24

Featured, ಉಡುಪಿ

ಮೂಳೂರು ಕಲ್ಲಿದ್ದಲು ಲೋಡ್ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ-ಹೈವೆ ಪಟ್ರೋಲ್ ಪೋಲಿಸ್ ನ‌ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ.

ಕಾಪು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರಿನಿಂದ ಹೊಸಪೇಟೆಗೆ ಕಲ್ಲಿದ್ದಲು ತುಂಬಿಸಿ ಸಾಗುತ್ತಿದ್ದ ಲಾರಿಯಲ್ಲಿ ಮೂಳೂರು ಬಿಲ್ಲವ ಸಮೀಪ ಸಾಗುತಿದ್ದಂತೆ ದಿಢೀರ್ ಬೆಂಕಿ ಕಾಣಿಸಿಕೊಂಡಿತು.

ಗಸ್ತುವಿನಲ್ಲಿದ್ದ ಹೈವೆ ಪಟ್ರೋಲ್ ಪೋಲಿಸರು ಲಾರಿಯಲ್ಲಿ ಬೆಂಕಿ ಕಂಡ ತಕ್ಷಣ ಲಾರಿಯನ್ನು ತಡೆದು ನಿಲ್ಲಿಸಿ ಚಾಲಕನಿಗೆ ಮಾಹಿತಿ ನೀಡಿ ಬೆಂಕಿ‌ನಂದಿಸುವಲ್ಲಿ ಸಹಕರಿಸಿ ಆಗುತ್ತಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.