ಮೂಳೂರು : ಶ್ರೀ ನಾರಾಯಣಗುರು ಸಭಾಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – vishwanews24

ಉಡುಪಿ

ಮೂಳೂರು : ಶ್ರೀ ನಾರಾಯಣಗುರು ಸಭಾಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸಭೆ

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಮೂಳೂರು ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸುಧಾಮ ಶೆಟ್ಟಿ ಮಾತಾಡಿ, ಸಂಘವು 2,09,000 ವಾರ್ಷಿಕ ನಿವ್ವಳ ಬಂಡವಾಳ ಹೊಂದಿದ್ದು ಸದಸ್ಯರಿಗೆ ಶೇ. ೨೫ ಡಿವಿಡೆಂಡ್ ಶೇ.೬೫ ಬೋನಸ್ ಘೋಷಿಸಲಾಗಿದೆ. ಭವಿಷ್ಯದಲ್ಲೂ ಸಂಘದ ಪ್ರಗತಿಗೆ ಎಲ್ಲಾ ಹೈನುಗಾರರು ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಪಶು ವೈದ್ಯರಾದ ಡಾ. ಪ್ರಶಾಂತ್ ಆರ್.ಗುಜ್ಜಲ್‌ಕರ್, ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಕೆಎಂಎಫ್ ವಿಸ್ತರಣಾಧಿಕಾರಿ ಯಶವಂತ ಅವರು ಕೆಎಂಎಫ್ ನಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಸದಸ್ಯರಾದ ಮನೇಶ ಶೆಟ್ಟಿ ಮಲ್ಲಾರು, ಶಶಿಧರ್ ಶೆಟ್ಟಿ ಬೆಳಪು, ಮೋಹಿನಿ ಎಸ್ ಕೋಟ್ಯಾನ್ ಬೆಳಪು ಇವರನ್ನು ಸನ್ಮಾನಿಸಲಾಯಿತು.

ಮುಡಾದಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಕುತಂತ್ರ : ಡಿಕೆ ಸುರೇಶ್ – vishwanews24

ಸಂಘದ ಉಪಾಧ್ಯಕ್ಷರಾದ ಮಹಾಲಿಂಗ ಅಂಚನ್, ನಿರ್ದೇಶಕರಾದ ಪಿ.ಕೆ ಕರಿಯ ಮೊಯ್ಲಿ, ಶಶಿಧರ್ ಶೆಟ್ಟಿ, ಎಂ.ಎಸ್. ಅಬ್ದುಲ್ ರೆಹೆಮಾನ್, ಅಣ್ಣಯ್ಯ ಪೂಜಾರಿ, ಕಿಶೋರ್ ಕೋಟ್ಯಾನ್, ಗಣೇಶ್ ಬಿ. ಶೆಟ್ಟಿ, ಸುಹಾಸಿನಿ ಶೆಟ್ಟಿ, ಮನೇಶ ಶೆಟ್ಟಿ, ಮೋಹಿನಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಾತ ಟಿ. ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಪ್ರಕಾಶ್ ಅಂಚನ್ ಅವರು ವಂದಿಸಿದರು. ರಾಷ್ಟçಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Leave a Reply