ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ : ತಪ್ಪು ಮಾಡಿದವರ ಪರ ನಾನು ಯಾವತ್ತೂ ನಿಲ್ಲಲ್ಲ : ಯು.ಟಿ ಖಾದರ್ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನನ್ನ ಕುಟುಂಬಸ್ಥರೇ ಆಗಲಿ, ಆಪ್ತರೇ ಆಗಲಿ ತಪ್ಪು ಮಾಡಿದವರ ಪರ ನಾನು ಯಾವತ್ತೂ ನಿಲ್ಲಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಕರೆಂಟ್ ಬಿಲ್ ಕೇಳಲು ಬಂದ ಮೆಸ್ಕಾಂ ಸಿಬ್ಬಂದಿ ಮೇಲೆ ಕಾಂಗ್ರೆಸ್ ಮುಖಂಡ ಅಮೀರ್ ಹಸನ್ ತುಂಬೆ ಹಲ್ಲೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರದಲ್ಲಿ ಎಲ್ಲರೂ ನನಗೆ ಆಪ್ತರು. ಅವರು ಕಾಂಗ್ರೆಸ್ಸಿನವರಾಗಲಿ, ಪತಿಪಕ್ಷದವರಾಗಲಿ ಎಲ್ಲರೂ ನನಗೆ ಆಪ್ತರು. ನನ್ನ ಕುಟುಂಬಸ್ಥರು, ಸ್ನೇಹಿತರು, ಆಪ್ತರು ಯಾರೇ ತಪ್ಪು ಮಾಡಿದರು ನಾನು ಅವರ ಪರ ನಿಲ್ಲುವವರಲ್ಲ, ನಿಂತೂ ಇಲ್ಲ, ಮುಂದೆ ಕೂಡ ನಿಲ್ಲೋದಿಲ್ಲ ಎಂದು ಹೇಳಿದರು.

ತಪ್ಪು ಮಾಡಿದವರ ಮೇಲೆ ಪೊಲೀಸರು ಕಾನೂನು ರೀತಿ ಕ್ರಮ ತೆಗೆದುಕೊಳ್ಳಬಹುದು. ನಾನು ಯಾರ ಪರವಾಗಿಯೂ ಹೋಗಲ್ಲ. ನಾವು ಸಾರ್ವಜನಿಕರ ಸಂಪರ್ಕದಲ್ಲಿರುತ್ತೇವೆ, ಹೀಗಾಗಿ ಎಲ್ಲರೂ ನಮಗೆ ಪರಿಚಯಸ್ಥರು ಎಂದು ತಿಳಿಸಿದ್ದಾರೆ.

ಅಮೀರ್ ಹಸನ್ ತುಂಬೆ ಹೀಗೆ ಹಲ್ಲೆ ಮಾಡಿದ ಬಗ್ಗೆ ತಿಳಿದು ನನಗೆ ಆಶ್ಚರ್ಯವಾಗಿದೆ. ನನಗೆ ತಿಳಿದಿರುವ ಪ್ರಕಾರ, ಅಮೀರ್ ಬಡವರಿಗೆ, ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡೋನು. ಇಲ್ಲಿಯವರೆಗೂ ಅವನು ಎಲ್ಲಾ ಜಾತಿ, ಧರ್ಮದವರ ಜೊತೆ ಚೆನ್ನಾಗಿದ್ದಾನೆ, ಭೇದಭಾವ ಮಾಡಿಲ್ಲ. ಆದ್ರೆ ಈಗ ಯಾಕೆ ಈ ರೀತಿ ಮಾತನಾಡಿದ್ದಾನೆ ಎಂದು ಸ್ವತಃ ನನಗೇ ಅಚ್ಚರಿಯಾಗುತ್ತಿದೆ ಎಂದಿದ್ದಾರೆ.

ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಪೊಲೀಸರಿಗೆ ಇದೆ. ನ್ಯಾಯ ಕೇಳುವಂತ ಹಕ್ಕು ನೋವು ಪಟ್ಟವರಿಗಿದೆ. ಸರ್ಕಾರಿ ಸಿಬ್ಬಂದಿ ನಮ್ಮ ವೈರಿಗಳಲ್ಲ. ಯಾರೂ ಕೂಡ ಈ ರೀತಿ ಮಾಡಬಾರದು ಎಂದರು.

 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292