ಮೇ 10 ನವ ಕರ್ನಾಟಕಕ್ಕೆ ಹೊಸ ದಿಕ್ಸೂಚಿ ನೀಡುವ ದಿನ: ಡಿಕೆಶಿ – Vishwanews24

Featured, ರಾಜ್ಯ ನ್ಯೂಸ್

ಮೇ 10 ರಾಜ್ಯಕ್ಕೆ ಅಂಟಿಕೊಂಡಿರುವ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಮುಕ್ತಗೊಳ್ಳುವ ದಿನ: ಡಿಕೆಶಿ

ಬೆಂಗಳೂರು: ಮೇ ತಿಂಗಳ 10ನೇ ತಾರೀಕು ರಾಜ್ಯದ ವಿಧಾನಸಭೆ ಮತದಾನದ ದಿನ ಮಾತ್ರವಲ್ಲ; ರಾಜ್ಯಕ್ಕೆ ಅಂಟಿಕೊಂಡಿರುವ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಮುಕ್ತಗೊಳ್ಳುವ ಹಾಗೂ ನವ ಕರ್ನಾಟಕಕ್ಕೆ ಹೊಸ ದಿಕ್ಸೂಚಿ ನೀಡುವ ದಿನವೂ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿಶ್ಲೇಷಿಸಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಧಿಕಾರಿ ಸರಕಾರದ ಅಡಿಯಾಳಾಗುವುದಿಲ್ಲ ಎಂಬ ನಂಬಿಕೆ ಇದೆ. ನಾಲ್ಕು ವರ್ಷಗಳಿಂದ ಡಬಲ್‌ ಎಂಜಿನ್‌ ಸರಕಾರದ ದಬ್ಟಾಳಿಕೆಗೆ ಜನ ಬೇಸತ್ತಿದ್ದು, ವೈಫ‌ಲ್ಯವಾಗಿರುವ ಎಂಜಿನ್‌ಗಳ ಬದಲಿಗೆ ಹೊಸ ಎಂಜಿನ್‌ ಅನ್ನು ಜನರೇ ನಿರ್ಮಾಣ ಮಾಡಲಿದ್ದಾರೆ ಎಂದರು.

ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿ-  ಲೈಸೆನ್ಸ್‌ ಹೊಂದಿರುವ ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ – Vishwanews24

ನಾವು ಕೇವಲ ರಾಜ್ಯದ ಜನರ ಜತೆಗೆ ಹೊಂದಾಣಿಕೆಯಾಗಿದ್ದೇವೆ ಹೊರತು, ಬೇರೆ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 40 ಪರ್ಸೆಂಟ್‌ ಕಮಿಷನ್‌ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ ಎಂದ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 40 ಪರ್ಸೆಂಟ್‌ ಕಮಿಷನ್‌ ಎನ್ನುವುದು ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಲೋಕಾಯುಕ್ತ ಸಂಸ್ಥೆ ಅದಕ್ಕೆ ಸ್ಟಾಂಪ್‌ ಒತ್ತಿದ್ದಾರೆ’ ಎಂದರು.

 

Leave a Reply