ಮೈಸೂರು: ‘ಜಿಲ್ಲೆಯಲ್ಲಿನ ಭೂ ಮಾಫಿಯಾ ತನಿಖೆಗೆ ಅಡ್ಡಿಪಡಿಸುವುದಿಲ್ಲ: ಸಚಿವ ಸೋಮಶೇಖರ್‌ – Vishwanews24

Featured, ರಾಜ್ಯ ನ್ಯೂಸ್

ಮೈಸೂರು: ‘ಜಿಲ್ಲೆಯಲ್ಲಿನ ಭೂ ಮಾಫಿಯಾ ತನಿಖೆಗೆ ಅಡ್ಡಿಪಡಿಸುವುದಿಲ್ಲ: ಸಚಿವ ಸೋಮಶೇಖರ್‌

ಹಿಂದಿನ ಜಿಲ್ಲಾಧಿಕಾರಿ ಕೈಗೆತ್ತಿಗೊಂಡಿರುವ ತನಿಖೆಗಳನ್ನು ಈಗಿನ ಜಿಲ್ಲಾಧಿಕಾರಿ ಮುಂದುವರಿಸಲಿದ್ದಾರೆ..

ಮೈಸೂರು: ‘ಜಿಲ್ಲೆಯಲ್ಲಿನ ಭೂ ಮಾಫಿಯಾ ವಿಚಾರವಾಗಿ ಜಿಲ್ಲಾಧಿಕಾರಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ತನಿಖೆಗೆ ನಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಗುರುವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಾದೇಶಿಕ ಆಯುಕ್ತರಿಗೂ ಕೆಲವರು ದೂರು ನೀಡಿದ್ದಾರೆ. ಎರಡು ದಿನಗಳಲ್ಲಿ ತನಿಖೆ ನಡೆಸಿ ವರದಿ ನೀಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಹಿಂದಿನ ಜಿಲ್ಲಾಧಿಕಾರಿ ಕೈಗೆತ್ತಿಗೊಂಡಿರುವ ತನಿಖೆಗಳನ್ನು ಈಗಿನ ಜಿಲ್ಲಾಧಿಕಾರಿ ಮುಂದುವರಿಸಲಿದ್ದಾರೆ’ ಎಂದರು.

ರೋಹಿಣಿ ಸಿಂಧೂರಿ ಅವರನ್ನೇ ತನಿಖಾಧಿಕಾರಿಯಾಗಿ ನೇಮಿಸಿಬೇಕೆಂದು ಎಚ್‌.ವಿಶ್ವನಾಥ್‌ ನೀಡಿರುವ ಸಲಹೆ ಕುರಿತು, ‘ಸಿಂಧೂರಿ ಅವರನ್ನೇ ನೇಮಿಸಲಿ, ಅದು ಸಂತೋಷದ ವಿಚಾರ. ವಿಶ್ವನಾಥ್‌ ಹಿರಿಯ ನಾಯಕ. ಅವರ ಸಲಹೆ ಸ್ವೀಕಾರವಾಗುವಂಥದ್ದು’ ಎಂದು ಹೇಳಿದರು.