ಮೋದಿ ಎಲ್ಲಿವರೆಗೂ ಇರ್ತಾರೆ ಅಲ್ಲಿವರೆಗೂ ಕಳ್ಳರ ಅಂಗಡಿಗಳು ಬಂದ್ : ಖರ್ಗೆ ಕೋಟೆಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ – Vishwanews24
ಕಲಬುರಗಿ: ಕರ್ನಾಟಕ ಸರ್ಕಾರ ರೈತರ ವಿರೋಧಿಯಾಗಿದೆ..ಈ ಸರ್ಕಾರವನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ. ರೈತರ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗೋಡೆಯಾಗಿದೆ. ರಿಮೋಟ್ ನಿಂದ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ರೈತರ ಪಟ್ಟಿಯನ್ನೇ ಕೊಟ್ಟಿಲ್ಲ. ರೈತರ ಖಾತೆಗೆ ಕೇಂದ್ರದ ನಗದು ಜಮೆಗೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಡ್ಡಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬುಧವಾರ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಿಜೆಪಿಯ ಬೃಹತ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಬದ್ಧ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ರೈತರ ಪರವಾಗಿ, ಬಂಜಾರಾ ಸಮುದಾಯ ಸೇರಿದಂತೆ ಎಲ್ಲರ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ.
ಕೇಂದ್ರ ಸರ್ಕಾರ ಒಂದು ರೂಪಾಯಿ ನೀಡಿದರೂ ಕೂಡಾ ಅದು ರೈತರ, ಬಡವರ ಖಾತೆಗೆ ನೇರವಾಗಿ ಜಮೆ ಆಗಲಿದೆ. ಈ ಹಿಂದೆ ಸುಳ್ಳು ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಮಾಡುತ್ತಿದ್ದರು. ಹೀಗಾಗಿ ಮೋದಿ ಇರುವವರೆಗೆ ಕಳ್ಳರ ಅಂಗಡಿ ಬಂದ್ ಆಗಲಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು. ಈಗ 56 ಇಂಚಿನ ಹೆಸರು ಕೇಳಿದರೆ ಸಾಕು ಕಾಂಗ್ರೆಸ್ ಪಕ್ಷದ ನಿದ್ದೆಗೆಡತೊಡಗಿದೆ ಎಂದು ನೇರವಾಗಿ ಚಾಟಿ ಬೀಸಿದರು.
Karnataka has a 'Mazboor' govt but I hope you don't want such a govt in the centre. Sometimes we have to pay a heavy price for a small mistake. The people of Karnataka must be experiencing the same : PM Shri @narendramodi #ModiMattomme
— BJP Karnataka (@BJP4Karnataka) March 6, 2019
