ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಗತ್ಯವಿದ್ದಾಗ ಸಲಹೆ ನೀಡಲು ಆರ್‌ಎಸ್‌ಎಸ್ ಸಿದ್ಧ : ಮೋಹನ್ ಭಾಗವತ್ -Vishwanews24
ಕಾನ್ಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತೊಂದರೆಯಾದಗಲೆಲ್ಲಾ ರಚನಾತ್ಮಕ ಸಲಹೆ ನೀಡಲು ಆರ್‌ಎಸ್‌ಎಸ್ ಸಿದ್ಧ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ತೊಂದರೆಯಾದಗಲೆಲ್ಲಾ ರಚನಾತ್ಮಕ ಸಲಹೆ ನೀಡಲು ನಾವು ಸಿದ್ಧ ಎಂದಿದ್ದಾರೆ. ಅಧಿಕಾರ ದುರ್ಬಳಕೆಯಾಗದಂತೆ ತಡೆಯುವುದು ಪ್ರಜಾಪ್ರಭುತ್ವ ಸರ್ಕಾರದ ಕರ್ತವ್ಯ ಎಂದೂ ಎಚ್ಚರಿಸಿದ್ದಾರೆ.
ಪ್ರಜಾಪ್ರಭುತ್ವದ ಮೂಲಕ ಚುನಾಯಿತರಾದವರಿಗೆ ಸಾಕಷ್ಟು ಅಧಿಕಾರವಿದೆ. ಆದರೆ, ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದರ್ಥವಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಸಮಸ್ಯೆ ಒದಗಿದಾಗಲೆಲ್ಲಾ ಸಂಘ ಅಗತ್ಯ ಸಲಹೆ ನೀಡಲಿದೆ. ಧನಾತ್ಮಕ ದೃಷ್ಟಿಕೋನದಿಂದಲೇ ಈ ಕಾರ್ಯ ಮಾಡಲಿದೆ ಎಂದರು
