ಮೋದಿ ಮಂದಿರ್ ಹೆಸರಿನ ಮ್ಯೂಸಿಯಂ ನಿರ್ಮಿಸಲು ಮುಂದಾಗಿರುವ ಮುಸ್ಲಿಂ ಮಹಿಳಾ ಕಾರ್ಯಕರ್ತರು -Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಮುಜಾಫ್ಘರ್ ನಗರ : ನಗರದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಬಿಜೆಪಿ ಮಹಿಳಾ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಬಳಿ ‘ಮೋದಿ ಮಂದಿರ್’ ಹೆಸರಿನ “ಮ್ಯೂಸಿಯಂ” ನಿರ್ಮಿಸಲು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದು, ದೇಶ ಮತ್ತು ನಾಗರೀಕರಿಗಾಗಿ ಉತ್ತಮ ಕೆಲಸ ಮಾಡಿದ್ದಾರೆ. ವಿದೇಶಗಳಲ್ಲೂ ಅವರ ಕಾರ್ಯ ಮೆಚ್ಚಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಹೀಗಾಗಿ ನಾವು ಕೃಷ್ಣಪುರಿಯಲ್ಲಿ ಮೋದಿ ಮಂದಿರವನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರಾದ ಸಮರ್ ಗಜ್ನಿ ಮತ್ತು ಮಹಿಳಾ ವಿಭಾಗದ ಸದಸ್ಯೆ ರೂಬಿ ಗಜ್ನಿ ಅವರು ಕೃಷ್ಣಪುರಿ ಕಾಲೋನಿಯಲ್ಲಿ ತಮಗೆ ಸೇರಿದ ಭೂಮಿಯಲ್ಲೇ ಮೋದಿ ಮಂದಿರ ನಿರ್ಮಿಸಲು ಮುಂದಾಗಿದ್ದಾರೆ.