ಮೋದಿ ಹಿರಿಮೆಗೆ ಈಗ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸೈಂಟ್ ಆಂಡ್ರೂ ಗೌರವ’ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ . ಸೈಂಟ್ ಆಂಡ್ರೂ ಲಭಿಸಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ರಷ್ಯಾ ರಾಯಭಾರಿ ಕಚೇರಿ ಭಾರತ ಮತ್ತು ರಷ್ಯಾದ ಸಂಬಂಧ ಸುಧಾರಣೆಗೆ ಶ್ರಮಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ ಎಂದು ಹೇಳಿದೆ.

ಈ ಹಿಂದೆ ಈ ಪ್ರಶಸ್ತಿಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ಅಜರ್ ಬೈಜಾನ್ ಪ್ರಧಾನಿ ಹೈದರ್ ಅಲಿಯಾವ್, ಕಜಕಿಸ್ತಾನದ ಅಧ್ಯಕ್ಷ ನುರ್ಸುಲ್ಟಾನ್ ನಜರ್ಬಯೆವ್ ಅವರಿಗೆ ರಷ್ಯಾ ಗೌರವಿಸಿದೆ.  ಈ ಗೌರವ ಪಡೆದ ಮೊದಲ ಭಾರತದ ಪ್ರಧಾನಿ ಮೋದಿ ಆಗಿದ್ದಾರೆ.

ಪ್ರಧಾನಿ ಮೋದಿಯವರನ್ನ 43.5 ಮಿಲಿಯನ್ ಜನ ಫೇಸ್ ಬುಕ್ ನ ವೈಯುಕ್ತಿಕ ಪೇಜ್ ನಲ್ಲಿ ಇಷ್ಟಪಟ್ಟರೆ, 13.7 ಮಿಲಿಯನ್ ಜನ ಅವರ ಅಧಿಕೃತ ಪೇಜ್ ನಲ್ಲಿ ಇಷ್ಟಪಟ್ಟಿದ್ದಾರೆ. ಅದರಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿಯ ನಂತರದ ಸ್ಥಾನವನ್ನ ಪಡೆದಿದ್ದಾರೆ.

23 ಮಿಲಿಯನ್ ಜನ ಟ್ರಂಪ್ ರನ್ನ ಫೇಸ್ ಬುಕ್ ನ ವೈಯಕ್ತಿಕ ಅಕೌಂಟ್ ನಲ್ಲಿ ಇಷ್ಟ ಪಟ್ಟಿದ್ದಾರೆ. ಜೋರ್ಡಾನ್ ನ ರಾಣಿ ರಣಿಯಾರನ್ನ 16.9 ಮಿಲಿಯನ್ ಜನ ಲೈಕ್ ಮಾಡುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.

ಈ ವರದಿಯನ್ನ ಲೀಡಿಂಗ್ ಗ್ಲೋಬಲ್ ಕಮ್ಯುನಿಕೇಷನ್ ಏಜೆನ್ಸಿಯಾದ ಬರ್ಸನ್, ಕೊಹನ್ ಮತ್ತು ವೋಫ್ ಎಂಬ ಸಂಸ್ಥೆ (ಬಿಸಿಡಬ್ಲ್ಯೂ) ಸಿದ್ದಪಡಿಸಿದ “2019 ಫೇಸ್ ಬುಕ್ ನಲ್ಲಿ ವಿಶ್ವದ ನಾಯಕರು” ಎಂಬ ವರದಿಯಲ್ಲಿ ಬಹಿರಂಗಪಡಿಸಿದೆ.