ಮೋದಿಗೆ ಮತ ಹಾಕಿದ್ರೆ ಅದೇ ನಮಗೆ ನೀಡುವ ಉಡುಗೊರೆ’ : ವಿಭಿನ್ನ ರೀತಿಯ ವಧು ವರರ ಮದುವೆಯ ಆಮಂತ್ರಣ ಪತ್ರಿಕೆ

Featured, ದಕ್ಷಿಣ ಕನ್ನಡ

ಮಂಗಳೂರು : ವಿವಾಹ ಅಮಂತ್ರಣ ಪತ್ರಿಕೆಯಲ್ಲಿ ಮದುವೆಯ ಕರೆಯೊಂದಿಗೆ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. “ಮೋದಿಗೆ ಮತ ಹಾಕಿದ್ರೆ ಅದೇ ವಧು ವರರಿಗೆ ನೀಡಿ ಉಡುಗೊರೆ ” ಎಂದು ಆಮಂತ್ರಣದಲ್ಲಿ ಮುದ್ರಿಸಿದ್ದಾರೆ.

ಈ ರೀತಿಯ ವಿವಾಹ ಆಮಂತ್ರಣವನ್ನು ಮುದ್ರಿಸಿದವರು ಸೋಮೇಶ್ವರ ನಿವಾಸಿಯಾಗಿ ಪ್ರವೀಣ್. ಇವರು ಇದೇ ಮುಂಬರುವ ಡಿ.31 ರಂದು ಕೇದಿಗೆ ನಿವಾಸಿ ಹೇಮಲತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆ ಕಾಗದದಲ್ಲಿ ಪ್ರಧಾನಿ ಮೋದಿ ಮೇಲಿನ ಅಭಿಮಾನವನ್ನು ಮೆರೆದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಮತ ಚಲಾಯಿಸುವಂತೆ ಮದುವೆ ಕಾಗದಲ್ಲಿ ವಿನಂತಿಸಿದ್ದಾರೆ.ವಿವಾಹ ಅಮಂತ್ರಣ ಪತ್ರಿಕೆಯಲ್ಲಿ ಮದುವೆಯ ಕರೆಯೊಂದಿಗೆ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. “ಮೋದಿಗೆ ಮತ ಹಾಕಿದ್ರೆ ಅದೇ ವಧು ವರರಿಗೆ ನೀಡಿ ಉಡುಗೊರೆ ” ಎಂದು ಆಮಂತ್ರಣದಲ್ಲಿ ಮುದ್ರಿಸಿದ್ದಾರೆ.

ಅಲ್ಲದೆ ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಮದುವೆ ಕಾಗದಲ್ಲಿ ಮುದ್ರಿಸಿದ್ದಾರೆ. ಇದೀಗ ಇವರ ಮದುವೆ ಕರೆಯೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

error: Content is protected !!