ಮ್ಯಾಜಿಕ್ ನಂಬರ್ ತಲುಪಿದ ಬಿಜೆಪಿ ; ನೂತನ ಸರ್ಕಾರ ರಚನೆಗೆ ಬಿ.ಎಸ್. ವೈ ನಿವಾಸದಲ್ಲಿ ಬಿರುಸಿನ ಚಟುವಟಿಕೆ ; ಗರಿಗೆದರಿದ ರಾಜಕೀಯ-Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿದ ಬಳಿಕ ಬಿಜೆಪಿ ಮ್ಯಾಜಿಕ್ ನಂಬರ್ ಪಡೆದಿದ್ದು, ನೂತನ ಸರಕಾರ ರಚಿಸಲು ಬಿ ಎಸ್ ಯಡಿಯೂರಪ್ಪನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ 14 ಶಾಸಕರ ರಾಜೀನಾಮೆಯಿಂದ ವಿಧಾನಸಭೆಯ ಸಂಖ್ಯಾಬಲ 210ಕ್ಕೆ ಕುಸಿದಿದ್ದು, 106 ಸದಸ್ಯರಿರುವ (105 ಬಿಜೆಪಿ ಶಾಸಕರು+ಓರ್ವ ಪಕ್ಷೇತರ ಶಾಸಕ) ಬಿಜೆಪಿ ಸರಕಾರ ರಚಿಸಲು ಹಾತೊರೆಯುತ್ತಿದೆ.

ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್ ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಬೆಂಬಲಿಸುವ ಪತ್ರ ಬಿಡುಗಡೆ ಮಾಡಿದ್ದಾರೆ.

ಸದ್ಯ ಕಾಂಗ್ರೆಸ್ ಜೆಡಿಎಸ್ 104 ಸಂಖ್ಯಾಬಲ ಹೊಂದಿದ್ದರೆ ಬಿಜೆಪಿ 106 ಸಂಖ್ಯಾಬಲ ಹೊಂದಿದ್ದು ನೂತನ ಸರ್ಕಾರ ರಚನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಬಿರುಸಿನ ಚಟುವಟಿಕೆ ಆರಂಭಿಸಿದ್ದಾರೆ.

ದೋಸ್ತಿ ನಾಯಕರ ಮನವೊಲಿಕೆ ಯತ್ನಕ್ಕೆ ಅತೃಪ್ತರು ಮುಂಬಯಿಯಿಂದ ವಾಪಸ್‌ ಬರುವ ಪ್ರಶ್ನೆಯೇ ಇಲ್ಲವೆಂಬ ಖಡಕ್‌ ಸಂದೇಶ ರವಾನಿಸಿದ್ದಾರೆ. ಇದರೊಂದಿಗೆ ಈಗಾಗಲೇ ಅಪಾಯಕ್ಕೆ ಸಿಲುಕಿರುವ ಮೈತ್ರಿ ಸರಕಾರ ತೀವ್ರ ನಿಗಾ ಘಟಕಕ್ಕೆ ಜಾರಿದಂತಾಗಿದೆ.