ಯಡಿಯೂರಪ್ಪ ಅವರ ದೀರ್ಘ ಕಾಲದ ರಾಜಕಾರಣ ನೋಡಿದ್ದೇನೆ, ಇಂತಹ ಆರೋಪಗಳು ಯಾವತ್ತೂ ಕೇಳಿಬಂದಿರಲಿಲ್ಲ : ಶೋಭಾ ಕರಂದ್ಲಾಜೆ  – vishwanews24

Featured, ರಾಜ್ಯ ನ್ಯೂಸ್

ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ಬಗ್ಗೆ ಮಾಹಿತಿ ಗೊತ್ತಿಲ್ಲ, ಮಾಧ್ಯಮಗಳ ಮೂಲಕ ನೋಡಿದೆ : ಶೋಭಾ ಕರಂದ್ಲಾಜೆ 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ಬಗ್ಗೆ ಮಾಹಿತಿ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ನೋಡಿದೆ. ಯಡಿಯೂರಪ್ಪ ಅವರ ದೀರ್ಘ ಕಾಲದ ರಾಜಕಾರಣ ನೋಡಿದ್ದೇನೆ. ಇಂತಹ ಆರೋಪಗಳು ಯಾವತ್ತೂ ಕೇಳಿಬಂದಿರಲಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಕೊಲ್ಕತ್ತಾ:  ಆಕ್ರೊಪೊಲಿಸ್ ಮಾಲ್‌ನಲ್ಲಿ ಅಗ್ನಿ ಅವಘಡ ; ಕಟ್ಟಡದೊಳಗೆ ಹಲವರು ಸಿಲುಕಿರುವ ಶಂಕೆ – vishwanews24

ಪೋಕ್ಸೋ ಪ್ರಕರಣದಲ್ಲಿ ಬಿಎಸ್‌ ಯಡಿಯೂರಪ್ಪ ವಿರುದ್ಧ ಕೋರ್ಟ್ ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಎಂದೂ ಬರದಿದ್ದ ಪ್ರಕರಣಗಳು ಈಗ ಯಾಕೆ ಬರ್ತಿವೆ? ಇದರಲ್ಲಿ ರಾಜ್ಯ ಸರ್ಕಾರದ ದ್ವೇಷ ರಾಜಕಾರಣದ ಪಾತ್ರ ಇದೆಯಾ? ಇದರ ಬಗ್ಗೆ ಗೊತ್ತಿಲ್ಲ. ಆದರೆ ನ್ಯಾಯಾಲಯ ಖಂಡಿತವಾಗಿ ನೆಲದ ಕಾನೂನು ಎತ್ತಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ನಾಯಕ ಯಡಿಯೂರಪ್ಪ ವಿರುದ್ಧ ಈ ಆರೋಪ ಯಾಕೆ ಬಂತು ಅಂತ ಜನ ಗಮನಿಸ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲರ ಮೇಲೆ ಕೇಸ್ ಹಾಕುವಂತಹ ಪ್ರಕರಣಗಳನ್ನು ಕೂಡಾ ಜನ ಗಮನಿಸ್ತಿದ್ದಾರೆ, ಕಾದು ನೋಡೋಣ ಎಂದರು.

ಉಡುಪಿ: ಅಕ್ರಮ ಗೋ ಸಾಗಟ ಮತ್ತು ಗೋ ಹತ್ಯೆ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಿ : ದಿನೇಶ್ ಮೆಂಡನ್ – vishwanews24

 

Leave a Reply