ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್‌ನಲ್ಲಿ ಇರಬೇಕಿತ್ತು,ಅವರಿಂದಲೇ ಈ ವಿಧಾನಸೌಧ ಹುಚ್ಚಾಸ್ಪತ್ರೆಯಂತಾಗಿದೆ : ವಾಟಾಳ್ ನಾಗರಾಜ್ -Vishwanews24
ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್‌ನಲ್ಲಿ ಇರಬೇಕಿತ್ತು, ಅವರಿಂದಲೇ ಈ ವಿಧಾನಸೌಧ ಹುಚ್ಚಾಸ್ಪತ್ರೆಯಂತಾಗಿದೆ : ವಾಟಾಳ್ ನಾಗರಾಜ್ -Vishwanews24
6 ನೇ ತಾರೀಖು ರಾಜ್ಯಾದ್ಯಂತ ರೈಲು ತಡೆ ಚಳವಳಿ..
ರಾಮನಗರ: ಯಡಿಯೂರಪ್ಪಗೆ ಬುದ್ಧಿ, ತಲೆ ಎರಡೂ ಇಲ್ಲ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್‌ನಲ್ಲಿ ಇರಬೇಕಿತ್ತು. ಆದರೆ ದುರಾದೃಷ್ಟವಶಾತ್ ವಿಧಾನಸೌಧದಲ್ಲಿದ್ದಾರೆ. ಅವರಿಂದಲೇ ಈ ವಿಧಾನಸೌಧ ಹುಚ್ಚಾಸ್ಪತ್ರೆಯಂತಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಮರಾಠ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ರಾಜ್ಯ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಇದೇ 6 ನೇ ತಾರೀಖು ರಾಜ್ಯಾದ್ಯಂತ ರೈಲು ತಡೆ ಚಳವಳಿಯನ್ನ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಯಡಿಯೂರಪ್ಪನವರು ಅಲಮ್ಮಪ್ರಭುಗಳ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ಮಾಡಲು ಹೊರಟ್ಟಿದ್ದಾರೆ. ಆದರೆ ಅದು ಅಲ್ಲಮ್ಮಪ್ರಭುಗಳ ಅನುಭವ ಮಂಟಪವಲ್ಲ, ಬದಲಾಗಿ ಅದು ಯಡಿಯೂರಪ್ಪನವರ ಅನುಭವ ಮಂಟಪವಾಗುತ್ತದೆ. ಇದು ಕೇವಲ ರಾಜಕೀಯಕ್ಕಾಗಿ ಮಾಡಲು ಹೊರಟ್ಟಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪ ಇದನ್ನೆಲ್ಲ ಬಿಡಬೇಕೆಂದು ಒತ್ತಾಯಿಸಿದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ ಅವರಿಂದ ಹಾಗೂ ಸರ್ಕಾರದ ಮಂತ್ರಿಗಳಿಂದ ಜನಪರವಾದ ಯಾವುದೇ ಕೆಲಸಗಳು ಆಗುತ್ತಿಲ್ಲವೆಂದು ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದರು. ಇನ್ನು ಯಡಿಯೂರಪ್ಪ ಸರ್ಕಾರದ ಮಂತ್ರಿಮಂಡಲ ಸಂಪೂರ್ಣವಾಗಿ ಕುಲಗಟ್ಟಿದೆ, ಯಾರು ಸಹ ಸಾಮಾನ್ಯ ಜನರ ಬಗ್ಗೆ ಕಾಳಜಿವಹಿಸುತ್ತಿಲ್ಲ. ಕೇವಲ ರಾಜಕೀಯವಾಗಿ ಆರೋಪ ಪ್ರತ್ಯಾರೋಪಗಳನ್ನ ಮಾಡಿಕೊಂಡು ಕಾಲಕಳೆಯುತ್ತಿದ್ದಾರೆಂದು ಕಿಡಿಕಾರಿದರು.
http://ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಆರಂಭವಾಗಲಿದೆ : ನಿಖಿಲ್ ಕುಮಾರಸ್ವಾಮಿ -Vshwanews24
