ಯಾರನ್ನೂ ಕೂಡಾ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ , ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ : ತೇಜಸ್ವಿ ಸೂರ್ಯ -Vishwanews24
ಯಾರನ್ನೂ ಕೂಡಾ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ , ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ : ತೇಜಸ್ವಿ ಸೂರ್ಯ -Vishwanews24
ಬೆಳಗಾವಿ,: “ಯಾರನ್ನೂ ಕೂಡಾ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ” ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕನ್ನಡಪರ ಹೋರಾಟಗಾರರಿಗೆ ಹೇಳಿದರು.
ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ತೇಜಸ್ವಿ ಸೂರ್ಯ ಬಂದ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮರಾಠಿಗರಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆರು ಕೋಟಿ ಕನ್ನಡಿಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಜವಾಬ್ದಾರಿ. ಎಲ್ಲ ಜಾತಿ, ಎಲ್ಲ ಸಮುದಾಯದ ಏಳಿಗೆ ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಬಂದ್ ಕರೆಯುವಂತಹದ್ದು ಸರಿಯಲ್ಲ, ಬಂದ್ ಕಲ್ಚರ್ ಬಂದ್ ಆಗಬೇಕು. ಬಂದ್ ಮಾಡುವುದನ್ನ ಈಗಾಗಲೇ ನಿಲ್ಲಿಸಿದ್ದಾರೆ. ಇಂದಿನ ಬಂದ್ ಯಾವುದೇ ಫಲ ಆಗುವುದಿಲ್ಲ. ಬಂದ್ ಕಲ್ಚರ್ ಈಗಾಗಲೇ ನಿಂತುಹೋಗಿದೆ. ಸರ್ಕಾರದ ಜೊತೆಗೆ ಕುಳಿತು ಚರ್ಚೆ ಮಾಡುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿಕೊಂಡ ಸೂರ್ಯ, ಸರ್ಕಾರ ಮತ್ತು ಯಡಿಯೂರಪ್ಪ ನಿಮ್ಮ ಮಾತುಗಳನ್ನ ಕೇಳಲು ತಯಾರಿದೆ. ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.
“ಬಂದ್ಗೆ ಕರೆ ನೀಡಿರುವುದು ಸರಿಯಲ್ಲ. ಇಂದಿನ ಬಂದ್ಗೆ ಯಾವುದೇ ಫಲ ದೊರೆಯುವುದಿಲ್ಲ. ಮೊದಲು ಬಂದ್ ಮಾಡುವ ವಿಚಾರ ನಿಲ್ಲಬೇಕು” ಎಂದರು.
ಸರ್ಕಾರದೊಂದಿಗೆ ಕುಳಿತು ಚರ್ಚಿಸುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿದ ಅವರು, “ಸರ್ಕಾರ ಹಾಗೂ ಬಿಎಸ್ವೈ ಅವರು ನಿಮ್ಮ ಮಾತುಗಳನ್ನು ಕೇಳಲು ತಯಾರಿದ್ದಾರೆ” ಎಂದು ಹೇಳಿದರು.
