ಯಾರಾದರೂ ನಮ್ಮ ತಂಟೆಗೆ ಬಂದರೆ ಅಂಥವರನ್ನು ನಾಶ ಮಾಡುತ್ತೇವೆ : ಮಮತಾ ಬ್ಯಾನರ್ಜಿ -Vishwanews24
ಕೋಲ್ಕತ್ತಾ, : ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ವಿಜಯ ಯಾತ್ರೆಯನ್ನು ಮಮತಾ ಬ್ಯಾನರ್ಜಿ ನಿಷೇಧಿಸಿದ್ದಾರೆ. “ಬಿಜೆಪಿಯಿಂದಾಗಿ ರಾಜ್ಯದಲ್ಲಿ(ಪಶ್ಚಿಮ ಬಂಗಾಳ) ಹಿಂಸಾಚಾರ ನಡೆಯುತ್ತಿದ್ದು ಆದ್ದರಿಂದ ವಿಜಯಯಾತ್ರೆಗೆ ನಾನು ಅನುಮತಿ ನೀಡುವುದಿಲ್ಲ.
ನನಗೆ ಬಂದ ಮಾಹಿತಿಯ ಪ್ರಕಾರ ರಾಜ್ಯದ ಹೂಗ್ಲಿ, ಬಂಕುರಾ, ಪುರುಲಿಯಾ ಮತ್ತು ಮಿಡ್ನಾಪೋರ್ ಗಳಲ್ಲಿ ವಿಜಯ ಯಾತ್ರೆಯ ಹೆಸರಿನಲ್ಲಿ ಬಿಜೆಪಿ ಹಿಂಸಾಚಾರ ನಡೆಸಲು ಉದ್ದೇಶಿಸಿದೆ. ಆದ್ದರಿಂದ ಯಾವುದೇ ವಿಜಯಯಾತ್ರೆಗೆ ನಾನು ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಿಡಿ ಕಾರಿದ್ದ ಮಮತಾ ಬ್ಯಾನರ್ಜಿ, ಹಿಂದುಗಳು ತ್ಯಾಗಕ್ಕೆ ಹೆಸರಾದವರು, ಮುಸ್ಲಿಮರು ಸಮಗ್ರತೆಗೆ ಹೆಸರಾದವರು, ಕ್ರೈಸ್ತರು ಪ್ರೀತಿ, ಸಿಕ್ಖರು ಬಲಿದಾನಕ್ಕೆ ಹೆಸರಾದವರು. ಇದು ನಮ್ಮ ಹಿಂದುಸ್ಥಾನ, ನಾವು ಅದನ್ನು ಕಾಪಾಡುತ್ತೇವೆ. ಯಾರಾದರೂ ನಮ್ಮ ತಂಟೆಗೆ ಬಂದರೆ ಅಂಥವರನ್ನು ನಾಶ ಮಾಡುತ್ತೇವೆ. ಇದೇ ನಮ್ಮ ಘೋಷ ವಾಕ್ಯ” ಎಂದಿದ್ದರು.
