ಯಾರಿಗಾದರೂ ಏನಾದರೂ ಒಳ್ಳೆಯದು ಮಾಡಲು ಹೊರಟಾಗ ಈ ರೀತಿ ಆಗುತ್ತದೆ : ಡಿಕೆಶಿ -Vishwanews24
ಬೆಂಗಳೂರು: ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ನಾನೇನೂ ತಪ್ಪು ಮಾಡಿಲ್ಲ, ರೇಪು ಮಾಡಿಲ್ಲ, ದುಡ್ಡು ಕದ್ದಿಲ್ಲ. ರಾಜಕೀಯವಾಗಿ ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಲು ಅವರನ್ನು ಹಿಡಿದಿಟ್ಟಿದ್ವಿ. ಹೀಗಾಗಿ ಅದಕ್ಕಾಗಿ ಈಗ ಬೇಕಾದಷ್ಟು ಅನುಭವಿಸುತ್ತಿದ್ದೇವೆ. ಪರವಾಗಿಲ್ಲ ಎಲ್ಲವನ್ನೂ ನಾವು ಫೇಸ್ ಮಾಡಬೇಕು ಎಂದರು.
ಏನಾದರೂ, ಯಾರಿಗಾದರೂ ಒಳ್ಳೆಯದು ಮಾಡಲು ಹೊರಟಾಗ ಈ ರೀತಿ ಆಗುತ್ತದೆ. ಗುರುವಾರ ನಾವು ಹಾಕಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಗುರುವಾರ ರಾತ್ರಿ 9.40ಕ್ಕೆ ನನಗೆ ಸಮನ್ಸ್ ಕೊಟ್ಟು ಒಂದು ಗಂಟೆಗೆ ಬರಬೇಕು ಎಂದು ನೋಟಿಸ್ ನೀಡಿದ್ದಾರೆ. ಅದಕ್ಕೂ ಮೊದಲು ಪ್ರೆಸ್ ಮೀಟ್ ಮಾಡಿ ಮಾತಾಡೇ ದೆಹಲಿಗೆ ಹೋಗುತ್ತೇನೆ. ನನಗೆ ಒಂದೆರಡು ಗಂಟೆ ಪರ್ಸನಲ್ ಕಮಿಟ್ ಮೆಂಟ್ ಕೆಲಸ ಇದೆ. ಆದ್ದರಿಂದ ಹೋಗುತ್ತಿದ್ದೇನೆ. ನನ್ನ ಯಾರೂ ಫಾಲೋ ಮಾಡಬೇಡಿ ಎಂದು ಡಿಕೆಶಿ ಮನವಿ ಮಾಡಿಕೊಂಡರು.
ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ ನೀಡಿದ್ದ ಹಿನ್ನೆಲೆಯಲ್ಲಿ ನನ್ನ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಲಾಗಿತ್ತು.ಕಾಂಗ್ರೆಸ್ಸಿನ ನಿಷ್ಠಾವಂತ ಸೈನಿಕ ಮತ್ತು ಜವಾಬ್ದಾರಿಯುತ ರಾಜಕಾರಣಿಯಾಗಿ, ನನ್ನ ಪಕ್ಷ ನಿರ್ದೇಶಿಸಿದಂತೆ ಮಾಡಿದ್ದೇನೆ. ಅದಕ್ಕಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಕಾನೂನು ವ್ಯವಸ್ಥೆಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅದನ್ನು ನಾನು ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ ಎದುರಿಸುತ್ತೇನೆ ಎಂದವರು ಹೇಳಿದ್ದಾರೆ.
Have received summons from ED late yesterday night at 9.40 PM asking for me to appear at 1PM in Delhi today.
Although the sudden scheduling by ED is malafide, I believe in rule of law & will definitely participate & fully co-operate with them and abide by the law of our country.
— DK Shivakumar (@DKShivakumar) August 30, 2019
