ಯಾವುದೇ ಕಾರಣಕ್ಕೂ ಮೋದಿ ಅಧಿಕಾರಕ್ಕೆ ಬರುವುದಿಲ್ಲ, ಬರೆದಿಟ್ಟುಕೊಳ್ಳಿ, : ಎಚ್‌ ಡಿ ರೇವಣ್ಣ – Vishwanews24

Featured, ರಾಜ್ಯ ನ್ಯೂಸ್

ಹಾಸನ : ಬರೆದಿಟ್ಟುಕೊಳ್ಳಿ, ಯಾವುದೇ ಕಾರಣಕ್ಕೂ ಮೋದಿ ಅಧಿಕಾರಕ್ಕೆ ಬರುವುದಿಲ್ಲ ಅಂತ ಸಚಿವ ಹೆಚ್.ಡಿ ರೇವಣ್ಣನವರು ಭವಿಷ್ಯ ನುಡಿದಿದ್ದಾರೆ.

ಅವರು ಇಂದು ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ, ಯಾವುದೇ ಕಾರಣಕ್ಕೂ ಮೋದಿ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಅಧಿಕಾರಕ್ಕೆ ಬಂದಮೇಲೆ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟರು? ಅಂತ ಪ್ರಶ್ನೆಮಾಡಿದ ಅವರು, ಖಾತೆಗೆ ಆರು ಸಾವಿರ ಹಾಕುತ್ತೇವೆ ಎಂದು ಹೇಳಿದರು. ಆದರೆ, ಆರು ಮಂದಿಗೆ ಆರು ಸಾವಿರ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮಾತನಾಡಿ, ಹಾಸನ ತಾಲೂಕಿನಲ್ಲಿ ಬಿಜೆಪಿ ಬಾವುಟ ಕಿತ್ತು ಹಾಕಿ ಜೆಡಿಎಸ್ ಬಾವುಟ ಹಾರಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ ಮುಂದಿನ ವಿಧಾನಸಭೆ ಚುನಾವಣೆಗೆ ಈಗಲೇ ಸಜ್ಜಾಗುತ್ತಿದ್ದೇವೆ. ಹಾಸನವನ್ನು ಜೆಡಿಎಸ್ ಭದ್ರಕೋಟೆ ಮಾಡಬೇಕು. ಯಾವುದೇ ಕಾರ್ಯಕರ್ತರು ಕಷ್ಟ ಬಂದರೆ ಸ್ಪಂದಿಸುವ ಶಕ್ತಿಯನ್ನು ನನ್ನ ತಂದೆ ತಾಯಿ ನೀಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಅವರು ಮಾತನಾಡುತ್ತ ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ ಮುಂದಿನ ವಿಧಾನಸಭೆ ಚುನಾವಣೆಗೆ ಈಗಲೇ ಸಜ್ಜಾಗುತ್ತಿದ್ದೇವೆ. ಹಾಸನವನ್ನು ಜೆಡಿಎಸ್ ಭದ್ರಕೋಟೆ ಮಾಡಬೇಕು. ಯಾವುದೇ ಕಾರ್ಯಕರ್ತರು ಕಷ್ಟ ಬಂದರೆ ಸ್ಪಂದಿಸುವ ಶಕ್ತಿಯನ್ನು ನನ್ನ ತಂದೆ ತಾಯಿ ನೀಡಿದ್ದಾರೆ ಎಂದು ಹೇಳಿದರು.