ಯುಪಿಎ  ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಎಷ್ಟು ಇತ್ತು ಎಂದು ಕಾಂಗ್ರೆಸ್  ಸ್ನೇಹಿತರು ಮೊದಲು ನೋಡಿಕೊಳ್ಳಲಿ :ನಿಖಿಲ್ ಕುಮಾರಸ್ವಾಮಿ ತಿರುಗೇಟು – vishwanews24

Featured, ರಾಜ್ಯ ನ್ಯೂಸ್

ಯುಪಿಎ  ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಎಷ್ಟು ಇತ್ತು ಎಂದು ಕಾಂಗ್ರೆಸ್  ಸ್ನೇಹಿತರು ಮೊದಲು ನೋಡಿಕೊಳ್ಳಲಿ :ನಿಖಿಲ್ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು: ಯುಪಿಎ  ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಎಷ್ಟು ಇತ್ತು ಎಂದು ಕಾಂಗ್ರೆಸ್  ಸ್ನೇಹಿತರು ಮೊದಲು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್  ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.

ಗ್ಯಾಸ್ ಬೆಲೆ 50 ರೂ. ಹೆಚ್ಚಳಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2004ರಿಂದ 2014ರವರೆಗೆ ಕಾಂಗ್ರೆಸ್‌ನ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತದೆ. ಯುಪಿಎ ಅಧಿಕಾರದಲ್ಲಿದ್ದಾಗ ಒಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,241 ರೂ. ಇತ್ತು. ಈಗ ನರೇಂದ್ರ ಮೋದಿ  ಸರ್ಕಾರದಲ್ಲಿ 854 ರೂ. ಇದೆ. 50 ರೂ. ಜಾಸ್ತಿ ಮಾಡಿದ ಮೇಲೆಯೂ ಗ್ಯಾಸ್ ಬೆಲೆ 850 ರೂ. ಮಾತ್ರ ಇದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಬಂಟಕಲ್: ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರದ ಅಭಿವೃದ್ಧಿ ಕಾರ್ಯ – vishwanews24

Leave a Reply