ಯೋಗಕ್ಕೆ ಗೌರವ ನೀಡದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣ ; ಯೋಗ ಮಾಡುವವರಿಗೆ ನೇರವಾಗಿ ದೇವರ ಆಶೀರ್ವಾದ ಸಿಗುತ್ತದೆ : ರಾಮದೇವ್ -Vishwanews24
ಮುಂಬೈ, : ಯೋಗಕ್ಕೆ ಗೌರವ ನೀಡದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಯೋಗ ಗುರು ರಾಮದೇವ್ ಹೇಳಿದ್ದಾರೆ.
ಮಹಾರಾಷ್ಟ್ರದ ನಂದೇಡ್ ನಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗದಿನದ ನಿಮಿತ್ತ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬಾಬಾ ರಾಮದೇವ್, ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು.
“ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಅವರು ಖಾಸಗಿಯಾಗಿಯಾದರೂ ಯೋಗ ಮಾಡುತ್ತಿದ್ದರು. ಆದರೆ ಅವರ ಉತ್ತರಾಧಿಕಾರಿಗಳ್ಯಾರೂ ಯೋಗಕ್ಕೆ ಗೌರವ ನೀಡಲಿಲ್ಲ. ಆದ್ದರಿಂದಲೇ ಅವರಿಗೆ ಅಧಿಕಾರ ದೊರೆತಿಲ್ಲ” ಎಂದು ರಾಮದೇವ್ ಹೇಳಿದರು.
“ಯೋಗ ಮಾಡುವವರಿಗೆ ನೇರವಾಗಿ ದೇವರ ಆಶೀರ್ವಾದ ಸಿಗುತ್ತದೆ.
ಯೋಗಕ್ಕೆ ಸಿಗಬೇಕಿದ್ದ ಗೌರವವನ್ನು ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರು. ಬಿಜೆಪಿಯ ಎಲ್ಲಾ ಶಾಸಕ, ಸಂಸದರು, ಸಚಿವರು ಯೋಗ ಮಾಡುತ್ತಾರೆ’ ಎಂದು ಅವರು ಹೇಳಿದರು.
