ಯೋಗಿಯಂತಹ ಸಿಎಂ ನಮ್ಮ ರಾಜ್ಯಕ್ಕೂ ಬೇಕಿದೆ  : ನೇಹಾ ಹಿರೇಮಠ್ ತಂದೆ ಹೇಳಿಕೆ – Vishwanews24

Featured, ರಾಜ್ಯ ನ್ಯೂಸ್

ಯೋಗಿಯಂತಹ ಸಿಎಂ ನಮ್ಮ ರಾಜ್ಯಕ್ಕೂ ಬೇಕಿದೆ  : ನೇಹಾ ಹಿರೇಮಠ್ ತಂದೆ ಹೇಳಿಕೆ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಪಾಟೀಲ್ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಹತ್ಯೆಯಾಗಿದೆ. ಈ ವಿಚಾರವಾಗಿ ವೀರಾಪೂರ ಓಣಿಯ ಕಾಂಗ್ರೆಸ್ ಕಾರ್ಪೊರೇಟರ್‌ ಹಾಗೂ ನೇಹಾ ಹಿರೇಮಠ್ ತಂದೆ ನಿರಂಜನ ಹಿರೇಮಠ ಹುಬ್ಬಳ್ಳಿ ಪೊಲೀಸರು ಹಾಗೂ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

ನನ್ನ ವಾರ್ಡ್‌ನಲ್ಲಿ ಇಂತಹ ಘಟನೆಯಾಗಿರುವುದನ್ನ ನಾನು ಖಂಡಿಸುತ್ತೇನೆ. ನನ್ನ ಪುತ್ರಿಯ ನೇಹಾ ಹತ್ಯೆ ನಡೆದು ಇನ್ನೂ ಒಂದು ತಿಂಗಳು ಕಳೆದಿಲ್ಲ. ಈ ರೀತಿ ಘಟನೆ ಮತ್ತೆ ಮರುಕಳಿಸಿದೆ. ನನ್ನ ಪುತ್ರಿ ಹತ್ಯೆಯಾದಾಗಲೇ ಈ ರೀತಿಯ ಮತ್ತೊಂದು ಘಟನೆಯಾಗಬಾರದು ಅಂತ ಹೇಳಿದ್ದೆ. ಆದರೂ ಇಂತಹ ಘಟನೆ ನಡೆದಿದೆ ಇದಕ್ಕೆ ಇಲ್ಲಿನ ಪೊಲೀಸ್ ಕಮೀಷನರ್ ಅವರೇ ಕಾರಣ. ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಎಲ್ಲಾ ಕಡೆ ಯುವಕರು ಡ್ರಗ್ಸ್ ಹಾವಳಿಗೆ ದಾರಿ ತಪ್ಪುತ್ತಿದ್ದಾರೆ. ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕರ್ನಾಟಕಕ್ಕೂ ಉತ್ತರಪ್ರದೇಶ, ಹೈದರಾಬಾದ್‌ ಮಾದರಿಯಲ್ಲೇ ಎನ್‌ಕೌಂಟರ್‌ ಆಗಬೇಕು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ನಮ್ಮ ರಾಜ್ಯಕ್ಕೂ ಬೇಕಿದೆ ಎಂದು ಹೇಳಿದ್ದಾರೆ.

6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ : ಮೈಸೂರಿಗೆ ತೆರಳಿ ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ – Vishwanews24

ಇಲ್ಲಿನ ಪೊಲೀಸ್ ಆಯುಕ್ತರು ಸರಿಯಾದ ಯಾವ ಕ್ರಮವನು ಕೈಗೊಳ್ಳುತ್ತಿಲ್ಲ. ಸರಿಯಾಗಿ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ಹೋಗಲಿ. ಅಂಜಲಿ ಕೂಡ ನನ್ನ ಮಗಳಿದ್ದಂತೆ. ನನ್ನ ಪುತ್ರಿ ನೇಹಾಳ ಹತ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ನಡೆದಿತ್ತು ಅದೇ ರೀತಿ ಇವಳ ಹತ್ಯೆಯನ್ನ ಖಂಡಿಸಬೇಕು ಎಂದು ನಿರಂಜನ ಹಿರೇಮಠ ಹೇಳಿದ್ದಾರೆ.

ಕಾಪು ಸಾವಿರ ಸೀಮೆಯ ಒಡೆಯನಿಗೆ ನಾಳೆ ಸೀಯಾಳ ಅಭಿಷೇಕ : vishwanews24

Leave a Reply