ರಷ್ಯಾ-ಉಕ್ರೇನ್ ಕದನ : ಬಿಲ್ಲುಬಾಣ ಹಿಡಿದ ಯೋಧನ ಫೋಟೋ ವೈರಲ್ – Vishwanews24
ರಷ್ಯಾ-ಉಕ್ರೇನ್ ಕದನ : ಬಿಲ್ಲುಬಾಣ ಹಿಡಿದ ಯೋಧನ ಫೋಟೋ ವೈರಲ್
ರಷ್ಯಾ-ಉಕ್ರೇನ್ ನಡುವಿನ ಕದನ ತಾರಕಕ್ಕೇರಿದ್ದು, ಈ ನಡುವೆ ರಷ್ಯಾದ ಸೈನಿಕನೊಬ್ಬ ಬಿಲ್ಲು-ಬಾಣವನ್ನು ಹಿಡಿದ ಫೋಟೋ ಒಂದು ವೈರಲಾಗಿದೆ.
ರಷ್ಯಾ ಯೋಧನ ಬಿಲ್ಲು-ಬಾಣ ಹಿಡಿದ ಫೋಟೋಗೆ ಕಾಮೆಂಟ್ ಮಾಡಿದ ನೆಟ್ಟಿಗರು, ಉಕ್ರೇನ್ ವಿರುದ್ಧ ಯುದ್ಧ ಮಾಡಿ, ರಷ್ಯಾದ ಬತ್ತಳಿಕೆಯ ಶಸ್ತ್ರಾಸ್ತ್ರಗಳೆಲ್ಲ ಖಾಲಿಯಾಗಿ ಈಗ ಉಳಿದಿರುವುದು ಬಿಲ್ಲು-ಬಾಣ ಮಾತ್ರ ಎಂದಿದ್ದಾರೆ.
ಇನ್ನು ಕೆಲವರು ಇದು ರಷ್ಯಾದ ಆಧುನಿಕ ಶಸ್ತ್ರಾಸ್ತ್ರವೆಂದು ವ್ಯಂಗ್ಯವಾಡಿದ್ದಾರೆ.
A photo of a Russian soldier from Bashkiriya at war in Ukraine is shared by Russian Telegram channels.
He is armed with bow and arrows. He also has a rifle just in case.
Is there a cavalry riding somewhere? pic.twitter.com/w3YPVD1Xry
— Anton Gerashchenko (@Gerashchenko_en) January 3, 2023
ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಸಲಹೆಗಾರ ಆ್ಯಂಟನ್ ಗೆರಾಶ್ಚೆಂಕೊ ರಷ್ಯಾ ಯೋಧನ ಫೋಟೋ ಹಂಚಿಕೊಂಡು, ಈ ಯೋಧ ಬಿಲ್ಲುಬಾಣಗಳಿಂದ ಸಜ್ಜಿತನಾಗಿದ್ದಾನೆ, ರೈಫಲ್ಗಳು ಅವನ ಬೆನ್ನಿನಲ್ಲಿವೆ. ಆತನ ಯುದ್ಧ ಕುದುರೆ ಅಲ್ಲೆ ಎಲ್ಲಾದರೂ ಇರಬಹುದೇ ಎಂದು ಅಪಹಾಸ್ಯ ಮಾಡಿದ್ದಾರೆ.
