ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಬಚ್ಪನ್ ಕಾ ಪ್ಯಾರ್’ ಖ್ಯಾತಿಯ ಸಹದೇವ್ ದಿರ್ಡೋ – Vishwanews24
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಬಚ್ಪನ್ ಕಾ ಪ್ಯಾರ್’ ಖ್ಯಾತಿಯ ಸಹದೇವ್ ದಿರ್ಡೋ ; ಗಂಭೀರ ಸ್ಥಿತಿಯಲ್ಲಿ ವೈರಲ್ ಹುಡುಗ – Vishwanews24
ಬಚ್‌ಪನ್ ಕಾ ಪ್ಯಾರ್ ಹಾಡಿನ ಮೂಲಕ ರಾತ್ರೋ ರಾತ್ರಿ ವೈರಲ್ ಆದ ಬಾಲಕ ಸಹದೇವ್ ದಿರ್ಡೋ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಚ್‌ಪನ್ ಕಾ ಪ್ಯಾರ್ ಮೇರ ಭೂಲ್ ನಯಿ ಜಾನಾ ಎಂದು ಹಾಡಿದ್ದ ಹುಡುಗನ ವಿಡಿಯೋ ಇನ್‌ಸ್ಟಗ್ರಾಮ್ ಸೇರಿ ಸೋಷಿಯಲ್ ಮಿಡಿಯಾ ಫ್ಲಾಟ್‌ಫಾರ್ಮ್‌ನಲ್ಲಿ ಟ್ರೆಂಡ್ ಆಗಿತ್ತು. ಇದೀಗ ಅಪಘಾತದಲ್ಲಿ ಬಾಲಕನ ತಲೆಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಈ ಕಾರಣಗಳಿಂದಾಗಿ ಬಾಲಕನನ್ನು ಸುಕ್ಮಾದ ಜಿಲ್ಲಾ ಆಸ್ಪತ್ರೆಯಿಂದ ಜಗ್ದಲ್‌ಪುರದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.
ವರದಿಗಳ ಪ್ರಕಾರ ಸಚ್‌ದೇವ್ ಕುಟುಂಬಸ್ಥರೊಂದಿಗೆ ಸುಕ್ಮಾಗೆ ಬರುತ್ತಿದ್ದ. ಈ ಸಂದರ್ಭ ಬೈಕ್ ಕ್ರಾಶ್ ಆಗಿದೆ. ಇದರಿಂದ ಸಚ್‌ದೇವ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುಕ್ಮಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬಾಲಕನನ್ನು ವೈದ್ಯಕೀಯ ಕಾಲೇಜಿಗೆ ಶಿಫ್ಟ್ ಮಾಡಲಾಗಿದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಈ ವಿಚಾರದಲ್ಲಿ ಸಹಾಯ ಮಾಡಿದ್ದಾರೆ. ಸಚ್‌ದೇವ್ ದಿರ್ಡೋ ಅವರ ಅಪಘಾತದ ಸುದ್ದಿಯ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ ಭೂಪೇಶ್ಬಾಘೇಲ್ ಅವರು ಜಿಲ್ಲಾಧಿಕಾರಿ ಶ್ರೀ ವಿನೀತ್ ನಂದನ್ವಾರ್ ಸುಕ್ಮಾ ಡಿಸ್ಟ್ ಅವರಿಗೆ ಶೀಘ್ರದಲ್ಲಿಯೇ ಉತ್ತಮ ವೈದ್ಯಕೀಯ ನೆರವು ನೀಡುವಂತೆ ಸೂಚಿಸಿದ್ದಾರೆ ಎಂದು ಛತ್ತೀಸ್ಗಢದ ಸಿಎಂಒ ಟ್ವೀಟ್ ಮಾಡಿದ್ದಾರೆ.
मुख्यमंत्री श्री @bhupeshbaghel ने सहदेव दिरदो की दुर्घटना की खबर पर दुःख जताते हुए कलेक्टर श्री विनीत नंदनवार @SukmaDist को त्वरित रूप से सर्वोत्तम चिकित्सा सहायता उपलब्ध कराने का निर्देश दिया है।
— CMO Chhattisgarh (@ChhattisgarhCMO) December 28, 2021
ಉಡುಪಿ : ಕೊರಗ ಸಮುದಾಯದ ಮೇಲೆ ಪೊಲೀಸರಿಂದ ಹಲ್ಲೆ : ಕೋಟ ಎಸ್ಐ ಅಮಾನತು , ಐವರು ಸಿಬ್ಬಂದಿ ವರ್ಗಾವಣೆ – Vishwanews24
