ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸುವವರೆಗೂ ನಾವು ಪ್ರತಿ ಮಂಗಳವಾರ ರಸ್ತೆಯಲ್ಲಿ ಹನುಮಾನ ಚಾಲಿಸಾ ಪಠಣ ಮಾಡುತ್ತೇವೆ : ಹಿಂದೂ ಯುವ ವಾಹಿನಿ ಕಾರ್ಯಕರ್ತರು -Vishwanews24
ಲಕ್ನೋ : ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಯುವ ವಾಹಿನಿ ಕಾರ್ಯಕರ್ತರು ರಸ್ತೆಯಲ್ಲಿಯೇ ಹನುಮಾನ್ ಚಾಲಿಸಾ ಪಠಣ ಮಾಡಿದ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆ ಸಿಂಕರಾ ರಾವ್ ಪಟ್ಟಣದಲ್ಲಿ ನಡೆದಿದೆ.
ಮಂಗಳವಾರ ಹಿಂದೂ ಯುವ ವಾಹಿನಿಯ ನೂರಾರು ಕಾರ್ಯಕರ್ತರು ರಸ್ತೆಯಲ್ಲಿಯೇ ನಿಂತು ಒಂದು ಗಂಟೆಗೂ ಹೆಚ್ಚು ಕಾಲ ಹನುಮಾನ್ ಚಾಲಿಸಾ ಪಠಣ ಮಾಡಿದ್ದಾರೆ. ಇದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.
ಮುಸ್ಲಿಂ ಬಾಂಧವರು ಪ್ರತಿ ಶುಕ್ರವಾರ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸುವವರೆಗೂ ನಾವು ಪ್ರತಿ ಮಂಗಳವಾರ ರಸ್ತೆಯಲ್ಲಿ ಹನುಮಾನ ಚಾಲಿಸಾ ಪಠಣ ಮಾಡುತ್ತೇವೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸರು, ನಡು ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ತೊಂದರೆಯಾಗಿದೆ ಎಂದು ಯಾರು ದೂರು ನೀಡಿಲ್ಲ. ಆದ್ದರಿಂದ ಈ ವಿಚಾರದಲ್ಲಿ ನಾವು ಮಧ್ಯಪ್ರದೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ.

