ರಾ.ಹೆ ಸೂಚನ ಫಲಕಗಳಿಗೆ ಸರಳ-ಸಜ್ಜನ ಕಾಪು ಶಾಸಕರ ಫ್ಲೆಕ್ಸ್ : ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ:vishwanes24
ರಾ.ಹೆ ಸೂಚನ ಫಲಕಗಳಿಗೆ ಸರಳ-ಸಜ್ಜನ ಕಾಪು ಶಾಸಕರ ಫ್ಲೆಕ್ಸ್ : ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ:Vishwanews24
ಕಾಪು: ಕಾಪುವಿಗೆ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ.
ಈ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ಹಲವಾರು ಸೂಚನ ಫಲಕಗಳಿಗೆ ಅಡ್ಡವಾಗಿ ಕಾಪು ಶಾಸಕರ ಫ್ಲೆಕ್ಸ್ ಗಳು ಬಿದ್ದಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಟೀಕೆಗಳು ವ್ಯಕ್ತವಾಗಿದೆ.

ಕಾನೂನಿನ ಅರಿವಿರುವ ಶಾಸಕರ ಈ ನಡೆ ಜನಸಾಮಾನ್ಯರನ್ನ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ಜನಸಾಮಾನ್ಯರು ಹಾಕುವ ಬ್ಯಾನರ್ ಫ್ಲೆಕ್ಸ್ಗಳಿಗೆ ಕಾನೂನಿನ ಅಡ್ಡಿಪಡಿಸುವ ಹೆದ್ದಾರಿ ಪ್ರಾಧಿಕಾರ ಮತ್ತು ಕಾಪು ಪುರಸಭೆ ಈ ವಿಚಾರವಾಗಿ ಮೌನವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಸುಲಭವಾಗಿ ಎಂದು ಮತ್ತು ಸರಿಯಾದ ಮಾಹಿತಿ ಸಿಗಲಿ ಎಂದು ಅಳವಡಿಸಿರುವ ನಾಮಫಲಕಗಳು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಅದರ ಮೇಲ್ಭಾಗದಲ್ಲಿಯೇ ಕಾಪು ಶಾಸಕರ ಫ್ಲೆಕ್ಸ್ ಗಳು ಪತ್ತೆಯಾಗಿದೆ.

ನಾಮಫಲಕಗಳ ಮೇಲೆ ಅಳವಡಿಸಿರುವ ಪ್ಲೆಕ್ಸ್ ಗಳನ್ನ ಅಧಿಕಾರಿಗಳು ತೆರವುಗೊಳಿಸುತ್ತಾರೆಯೋ ಅಥವಾ ಶಾಸಕರ ಕೃಪಾಕಟಾಕ್ಷದಲ್ಲಿ ಅವರಿಗೆ ಬೆಂಬಲ ಕೊಡುತ್ತಾ ಇರುತ್ತಾರೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
