ರಾಂಗ್ಸೈಡ್ನಲ್ಲಿ ಬಂದ ಪೊಲೀಸ್ ವಾಹನ ಢಿಕ್ಕಿ : 6 ವರ್ಷದ ಬಾಲಕಿ ಸಾವು – Vishwanews24
ರಾಂಗ್ಸೈಡ್ನಲ್ಲಿ ಬಂದ ಪೊಲೀಸ್ ವಾಹನ ಢಿಕ್ಕಿ : 6 ವರ್ಷದ ಬಾಲಕಿ ಸಾವು
ಗುರುಗ್ರಾಮ್ : ರಾಂಗ್ ಸೈಡ್ನಲ್ಲಿ ಬಂದ ಪೊಲೀಸರ ತುರ್ತು ಪ್ರತಿಕ್ರಿಯೆ ವಾಹನವೊಂದು ಬಾಲಕಿಗೆ ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ ಘಟನೆ ಗುರುಗ್ರಾಮ್-ಫರಿದಾಬಾದ್ ರಸ್ತೆಯಲ್ಲಿ ನಡೆದಿದೆ.
ಆರು ವರ್ಷದ ಬಾಲಕಿ ಘಟನೆಯಲ್ಲಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ. ಭಾನುವಾರ ಘಟನೆ ಸಂಭವಿಸಿದೆ ಎಂದು ಗುರುಗ್ರಾಮ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿಕಾಸ್ ಕೌಶಿಕ್ ತಿಳಿಸಿದ್ದಾರೆ.
ಗ್ವಾಲ್ ಪಹಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವ್ಯಾನ್ನಲ್ಲಿದ್ದ ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ವ್ಯಾನ್ ಚಾಲಕ ಸೇರಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಎಸಿಪಿ ತಿಳಿಸಿರುವುದಾಗಿ ವರದಿಯಾಗಿದೆ.
Join our Whatsapp group by clicking the below link 👇👇
