ರಾಜೀವ್ ಗಾಂಧಿ ಜನ್ಮದಿನ : ಅವರನ್ನು ತಂದೆಯಾಗಿ ಪಡೆದಿದ್ದು ಅದೃಷ್ಟ ಹಾಗೂ ಹೆಮ್ಮೆ : ರಾಹುಲ್ ಗಾಂಧಿ -Vishwanews24
ನವದೆಹಲಿ: ಇಂದು ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಜನ್ಮದಿನವಾಗಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವಾರು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75ನೇ ಜಯಂತಿ. ಈ ದಿನದಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ತಂದೆಯ ಬಗ್ಗೆ ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದಂದು ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಈ ಕುರಿತು ಟ್ವೀಟ್ ಮಾಡಿ ಅಪ್ರತಿಮ ದೂರ ದೃಷ್ಟಿ ಹೊಂದಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ, ಅವರನ್ನು ತಂದೆಯಾಗಿ ಪಡೆದಿದ್ದು ನಂಬಲಾಗದಷ್ಟು ಅದೃಷ್ಟ ಹಾಗೂ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ರಾಜೀವ್ ಗಾಂಧಿ ಅವರು ಪ್ರಸಕ್ತ ಕಾಲಕ್ಕಿಂತ ಬಹಳ ಮುಂದಿನ ಪ್ರಚಂಡ ದೃಷ್ಟಿಕೋನ ಹೊಂದಿದ್ದ ವ್ಯಕ್ತಿ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ಸಹಾನುಭೂತಿ ಮತ್ತು ಪ್ರೀತಿಯ ಮನುಷ್ಯರಾಗಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Rajiv Gandhi was a man with a tremendous vision, far ahead of his times. But above all else, he was a compassionate and loving human being.
I am incredibly lucky and proud to have him as my father.
We miss him today and everyday. pic.twitter.com/jWUUZQklTi
— Rahul Gandhi (@RahulGandhi) August 20, 2020
