ರಾಜ್ಯ ಸರ್ಕಾರ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧದ ಭಜನೆ ಮಾಡುತ್ತಿದೆ : ದಿನೇಶ್ ಗುಂಡೂರಾವ್ – Vishwanews24

Featured, ರಾಜ್ಯ ನ್ಯೂಸ್

ಭಗವದ್ಗೀತೆಯ ತತ್ವಕ್ಕೆ ವಿರುದ್ಧವಾಗಿ ಮನುಷ್ಯ ದ್ವೇಷ ಪಸರಿಸುತ್ತಿರುವ ಬಿಜೆಪಿಯವರು ನಿಜವಾದ ಧರ್ಮದ್ರೋಹಿಗಳು..

ಸಾಧನೆಯ ಆಧಾರದಲ್ಲಿ ಜನರ ಮುಂದೆ ಹೋಗಲು ಈ ಸರ್ಕಾರಕ್ಕೆ ಮುಖವಿಲ್ಲ..

ಬೆಂಗಳೂರು : ರಾಜ್ಯದ ಅಭಿವೃದ್ಧಿಯನ್ನು ಕಾಲ ಕಸ‌ ಮಾಡಿಕೊಂಡಿರುವ ರಾಜ್ಯ ಸರ್ಕಾರ ಹಿಜಾಬ್,ಹಲಾಲ್,ವ್ಯಾಪಾರ ನಿಷೇಧದ ಭಜನೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ, ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ಸಾಧನೆಯ ಆಧಾರದಲ್ಲಿ ಜನರ ಮುಂದೆ ಹೋಗಲು ಈ ಸರ್ಕಾರಕ್ಕೆ ಮುಖವಿಲ್ಲ.

ಹಾಗಾಗಿ ಮುಗ್ದ ಜನರಿಗೆ ಧರ್ಮದ ಕಣ್ಕಾಪು ಕಟ್ಟಿ ಮೂರ್ಖರನ್ನಾಗಿಸುತ್ತಿದೆ. ಧರ್ಮದ ಅಮಲು ತಲೆಗೇರಿಸಿಕೊಂಡಿರುವ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

‘ಭಗವದ್ಗೀತೆ,ಬೈಬಲ್,ಕುರಾನ್ ಸೇರಿದಂತೆ ಎಲ್ಲಾ ಗ್ರಂಥಗಳ ಸಾರವೇ ಶಾಂತಿ ಮತ್ತು ಪ್ರೀತಿ. ಯಾವ ಧರ್ಮವೂ ಮನುಷ್ಯ ದ್ವೇಷದ ಬೋಧನೆ ಮಾಡಿಲ್ಲ. ಗ್ರಂಥಗಳ ಸಾರ ಗೊತ್ತಿಲ್ಲದ ಬಿಜೆಪಿಯವರು ಜನರ ಮನಸ್ಸಿನಲ್ಲಿ ಧರ್ಮದ ವಿಷಬೀಜ ಬಿತ್ತುತ್ತಿದ್ದಾರೆ. ಭಗವದ್ಗೀತೆಯ ತತ್ವಕ್ಕೆ ವಿರುದ್ಧವಾಗಿ ಮನುಷ್ಯ ದ್ವೇಷ ಪಸರಿಸುತ್ತಿರುವ ಬಿಜೆಪಿಯವರು ನಿಜವಾದ ಧರ್ಮದ್ರೋಹಿಗಳು’ ಎಂದು ಆರೋಪ ಮಾಡಿದ್ದಾರೆ.

ಉಡುಪಿ : ಮುಸಲ್ಮಾನ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಬಹಿಷ್ಕಾರ : ಅವಕಾಶ ನೀಡುವಂತೆ  ಪೇಜಾವರ ಶ್ರೀಗಳಿಗೆ ಮನವಿ – Vishwanews24

Leave a Reply