ರಾಜ್ಯ ಸರ್ಕಾರದ ಈ ಬಜೆಟ್ ಅಂಕಿ ಅಂಶಗಳೇ ಪ್ರಶ್ನಾತೀತ : ಯೋಗೇಶ್ ವಿ ಶೆಟ್ಟಿ – Vishwanews24
ರಾಜ್ಯ ಸರ್ಕಾರದ ಈ ಬಜೆಟ್ ಅಂಕಿ ಅಂಶಗಳೇ ಪ್ರಶ್ನಾತೀತ”
ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಬಜೆಟಿನ ಅಂಕಿ ಅಂಶಗಳು ಅಪ್ರಸ್ತುತ. ನಾಳೆ ನಮ್ಮದೇ ಸರಕಾರ ಬರಬಹುದು. ನಮ್ಮದೇ ಆದ ಬಜೆಟ್ ಬಗ್ಗೆ ಆಲೋಚನೆ ಮಾಡಿದ್ದೇವೆ ಈಗಾಗಲೇ ಪಂಚರತ್ನ ಯೋಜನೆಗಳ ಸಹಿತ ಅನೇಕ ಅಂಶಗಳನ್ನು ಒಳಗೊಂಡ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿಯವರು ಈಗಾಗಲೇ ರೂಪುರೇಷೆಗಳನ್ನು ತಯಾರು ಮಾಡಿರುತ್ತಾರೆ.
ಈ ಬಜೆಟ್ ಒಟ್ಟಾರೆಯಾಗಿ ಹೇಳಬೇಕಾದರೆ ಓಟಿಗಾಗಿ/ ಚುನಾವಣೆಗಾಗಿ ಜನರನ್ನು ಮರಳು ಗೊಳಿಸುವಂತಹ ಬಜೆಟ್ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರು ಯೋಗೇಶ್ ವಿ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
