ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿಸುದ್ದಿ : `ಇನಾಮು ಭೂಮಿ’ ಪಹಣಿಗೆ ಅರ್ಜಿ ಸಲ್ಲಿಕೆ ಅವಧಿ 1 ವರ್ಷ ವಿಸ್ತರಣೆ – Vishwanews24
- ಇನಾಮು ಭೂಮಿಗೆ ಪಹಣಿ ನೀಡುವ ಮಸೂದೆ ಮಂಡನೆ
- ಮಸೂದೆಯಲ್ಲಿ ಪಹಣಿಗೆ ಅರ್ಜಿ ಸಲ್ಲಿಕೆ ಅವಧಿ 1 ವರ್ಷ ವಿಸ್ತರಣೆಗೆ ಅವಕಾಶ
- ರಾಜ್ಯದಲ್ಲಿದೆ 1 ಲಕ್ಷ ಹೆಕ್ಟೇರ್ ಇನಾಮು ಭೂಮಿ, ಸಾವಿರಾರು ರೈತರಿಗೆ ಅನುಕೂಲ
- ಕೈಗಾರಿಕೆಗೆ ಪ್ರತ್ಯೇಕ ಆಸ್ತಿ ತೆರಿಗೆ, ಸರ್ಕಾರಿ ಸರ್ವೇಯರ್ ಕುರಿತ ಮಸೂದೆಯೂ ಮಂಡನೆ
ಬೆಳಗಾವಿ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನಿಗೆ (ಇನಾಮು) ಪಹಣಿ ಪಡೆಯಲು ಅನುಕೂಲವಾಗಲು ಅರ್ಹರು ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಿಸುವ ಸಂಬಂಧ ಇನಾಮುಗಳ ರದ್ದತಿ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ ಸೇರಿದಂತೆ ಮೂರು ವಿಧೇಯಕ ಮಂಡನೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕಾನೂನು ಮತ್ತು ಸಂಸದೀಯಯ ಸಚಿವ ಜೆ.ಸಿ.ಮಾಧುಸ್ವಾಮಿ, ರಾಜ್ಯದಲ್ಲಿ ಸುಮಾರು 1 ಲಕ್ಷ ಎಕರೆಯಷ್ಟು ಇನಾಮು ಭೂಮಿ ಇದ್ದು, ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆಅದಕ್ಕೆ ಸರಿಯಾದ ಪಹಣಿ ಇಲ್ಲದ ಕಾರಣ ರೈತರಿಗೆ ಬ್ಯಾಂಕ್ ಗಳಲ್ಲಿ ಸಾಲ ಸಿಗುತ್ತಿಲ್ಲ. ಸರ್ಕಾರಿ ಯೋಜನೆಗಳಿಗೆಭೂ ಸ್ವಾಧೀನವಾದರೆ ಪರಿಹಾರ ಸಿಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಅರ್ಹ ರೈತರು ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಿಸಲು ಅವಕಾಶನೀಡಲಾಗಿದೆ.
ರಾಜ್ಯದಲ್ಲಿ ಶೀಘ್ರವೇ 5,263 ಪಶು ವೈದ್ಯರ ನೇಮಕ : ಸಚಿವ ಪ್ರಭು ಚವ್ಹಾಣ್ – Vishwanews24
