ರಾಜ್ಯದಲ್ಲಿ ಇಂದಿನಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಪ್ಯೂ ಜಾರಿ -Vishwanews24
ರಾಜ್ಯದಲ್ಲಿ ಇಂದಿನಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಪ್ಯೂ ಜಾರಿ : ಏನಿರುತ್ತೆ? ಏನಿರಲ್ಲ?
ಜುಲೈ 5 ರಿಂದ ಆಗಸ್ಟ್ 8 ರವರೆಗೆ ಪ್ರತಿ ಭಾನುವಾರ ಲಾಕ್ ಡೌನ್..
ಜು.10 ರಿಂದ ಎಲ್ಲಾ ಶನಿವಾರದಂದು ಸರ್ಕಾರಿ ರಜೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇಂದಿನಿಂದ ಪ್ರತಿನಿತ್ಯ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ಕರ್ಪ್ಯೂ ಜಾರಿಯಲ್ಲಿರಲಿದೆ. ಜೊತೆಗೆ ಜುಲೈ 5 ರಿಂದ ಆ.8 ರವರೆಗೆ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಕರ್ಪ್ಯೂ ಅವಧಿಯಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಚಲನೆಯನ್ನು ನಿಷೇಧಿಸಿದೆ.
ಜುಲೈ 5 ರಿಂದ ಆಗಸ್ಟ್ 8 ರವರೆಗೆ ಪ್ರತಿ ಭಾನುವಾರ ಲಾಕ್ ಡೌನ್ ಇರಲಿದೆ. ಹಾಗೇ ಜು.10 ರಿಂದ ಎಲ್ಲಾ ಶನಿವಾರದಂದು ಸರ್ಕಾರಿ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರಾತ್ರಿಕರ್ಪ್ಯೂನಲ್ಲಿ ಏನಿರುತ್ತೆ ?
ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸೇವೆಗೆ ಅವಕಾಶ
ಕೊರೋನಾ ವಾರಿಯರ್ಸ್ ವಾಹನ ಸಂಚಾರ , ಓಡಾಟಕ್ಕೆ ಅವಕಾಶ
ಆಸ್ಪತ್ರೆ ಸೇವೆಗಳು , ಮೆಡಿಕಲ್ ಸ್ಟೋರ್ಸ್ ತೆರೆದಿರುತ್ತವೆ
ಅಗತ್ಯ ವಸ್ತು ಸೇವೆಗಳಿಗೆ ನಿರ್ಬಂಧ ಇರಲ್ಲ
ಅಗತ್ಯ ವಸ್ತು / ಸೇವೆಗಳ ವಾಹನಗಳ ಸಂಚಾರ ಇರುತ್ತೆ
ರಾತ್ರಿ ಕರ್ಫ್ಯೂನಲ್ಲಿ ಏನಿರಲ್ಲ ?
ಮಾಲ್ ಗಳು , ಸೂಪರ್ ಮಾರ್ಕೆಟ್ ಗಳು ಬಂದ್
ದೇವಸ್ಥಾನ , ಮಸೀದಿ , ಚರ್ಚ್ ಬಂದ್
ಹೋಟೆಲ್ ಡೈನಿಂಗ್ , ರೆಸ್ಟೋರೆಂಟ್ ಬಂದ್
ಖಾಸಗಿ ವಾಹನ ಸಂಚಾರ , ಓಡಾಟ ಬಂದ್
ಮದ್ಯದ ಅಂಗಡಿಗಳು , ಬಾರ್ ಗಳು ಬಂದ್
