ರಾಜ್ಯದಲ್ಲಿ ಫೆ. 1 ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿ ಆರಂಭ -Vishwanews24
ರಾಜ್ಯದಲ್ಲಿ ಫೆ. 1 ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿ ಆರಂಭ -Vishwanews24
ಬೆಂಗಳೂರು:ರಾಜ್ಯದಲ್ಲಿ ಒಂಬತ್ತನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿಯ ಆಫ್ ಲೈನ್ ಪಾಠಗಳನ್ನು ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಫೆಬ್ರವರಿ ಒಂದರಿಂದ ತರಗತಿಗಳು ಆರಂಭವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಎರಡೂ ಇಲಾಖೆ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು. ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುರೇಶ್ ಕುಮಾರ್ ಅವರು, ರಾಜ್ಯದಲ್ಲಿ ಈಗಾಗಲೇ 10ನೇ ತರಗತಿ ಹಾಗೂ ದ್ವಿತೀಯ ಪದವಿ ಪೂರ್ವ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ಅದರಂತೆ 9ನೇ ತರಗತಿ ಹಾಗೂ ಪ್ರಥಮ ಪದವಿ ಪೂರ್ವ ತರಗತಿಗಳು ನಡೆಯಲಿದ್ದು, ಹಾಜರಾತಿ ಕಡ್ಡಾಯವಲ್ಲ. 6ರಿಂದ ಎಂಟನೇ ತರಗತಿಯವರೆಗೆ ವಿದ್ಯಾಗಮ ತರಗತಿಗಳು ಮುಂದುವರಿಯಲಿದೆ. ಜೊತೆಗೆ 1ರಿಂದ 5ನೇ ತರಗತಿ ಆರಂಭಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.
ಕಾಪು : ಚಂದ್ರನಗರದಲ್ಲಿ ನಾಲ್ಕು ರಸ್ತೆ ಗುರುತಿಸುವ ನಾಮ ಫಲಕ ಉದ್ಘಾಟನೆ -Vishwanews24
