ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಯಲು ಹೊಸ ಪ್ಲ್ಯಾನ್‌: ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ – vishwanews24

Featured, ರಾಜ್ಯ ನ್ಯೂಸ್

ಭ್ರೂಣಲಿಂಗ ಪತ್ತೆ ಸುಳಿವಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ – ಕರ್ನಾಟಕ ಆರೋಗ್ಯ ಇಲಾಖೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ  ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಹೆಣ್ಣು ಭ್ರೂಣ ಪತ್ತೆಯಾಗುತ್ತಿದ್ದಂತೆ ಗರ್ಭಪಾತ ಮಾಡಲಾಗುತ್ತಿದೆ. ಹೀಗಾಗಿ ಸದ್ಯ ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ತಡೆಯಲು ಆರೋಗ್ಯ ಇಲಾಖೆ  ಮುಂದಾಗಿದ್ದು, ಹೊಸ ಪ್ಲ್ಯಾನ್‌​ವೊಂದನ್ನು ಮಾಡಿದೆ. ಭ್ರೂಣಲಿಂಗ ಪತ್ತೆ ಹಾಗೂ ಹತ್ಯ ನಡೆಯುತ್ತಿದ್ದರೆ ಈ ಬಗ್ಗೆ ಸಾರ್ವಜನಿಕರು ಇಲಾಖೆಗೆ ಸೂಳಿವು ನೀಡಿದರೆ ಬರೋಬ್ಬರಿ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಭ್ರೂಣಹತ್ಯೆ ಸಂಪೂರ್ಣ ನೆಲಸಮ ಮಾಡಲು ಆರೋಗ್ಯ ಇಲಾಖೆ ಈ ಮಾಸ್ಟರ್ ಪ್ಲ್ಯಾನ್‌ ಸಿದ್ದವಾಗಿದ್ದು, ಆ ಮೂಲಕ ಭ್ರೂಣಹತ್ಯೆ ಕಿರಾತಕರ ಮಟ್ಟಹಾಕಲು ಹೊಸ ತಂತ್ರರೂಪಿಸಲಾಗಿದೆ. ಭ್ರೂಣಹತ್ಯೆ ಹಾಗೂ ಪತ್ತೆ ಯಾವುದೇ ಭಾಗದಲ್ಲಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಸ್ಪಷ್ಟವಾಗಿ ಆರೋಗ್ಯ ಇಲಾಖೆ ಜಸ್ಟ್ ಮಾಹಿತಿ ನೀಡಿದರೆ ಸಾಕು.

ಮಂಗಳೂರು: ಉದ್ಯಮಿಗೆ ಚೂರಿಯಿಂದ ಇರಿದು ಮನೆ ದರೋಡೆ ; ಚಿನ್ನಾಭರಣ, ನಗದು ದೋಚಿ ಪರಾರಿ – vishwanews24

ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಹಣ ನೀಡುವುದರೊಂದಿಗೆ ಮಾಹಿತಿ ನೀಡಿದವರ ಮಾಹಿತಿಯನ್ನ ಕೂಡ ಗೌಪ್ಯವಾಗಿ ಇಡಲಾಗುತ್ತದೆ. ಈ ಹಿಂದೆ ಗುಪ್ತಕಾರ್ಯಚರಣೆಗೆ 50 ಸಾವಿರ ರೂ. ಹಣ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನ ಒಂದು ಲಕ್ಷಕ್ಕೆ ಏರಿಕೆ ಮಾಡಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್​ ಸುತ್ತೋಲೆ ಹೊರಡಿಸಿದ್ದಾರೆ.

ಕಾನೂನು ಉಲ್ಲಂಘಿಸಿ ಸುದ್ದಿಯಲ್ಲಿರುವವರು ಶ್ರೀಮಂತರು, ಶಕ್ತಿಶಾಲಿಗಳು : ನಟಿ ರಮ್ಯಾ ವಾಗ್ದಾಳಿ – vishwanews24

Leave a Reply