ರಾಜ್ಯದಲ್ಲಿ ಶೀಘ್ರವೇ 5,263 ಪಶು ವೈದ್ಯರ ನೇಮಕ : ಸಚಿವ ಪ್ರಭು ಚವ್ಹಾಣ್ – Vishwanews24
ರಾಜ್ಯದಲ್ಲಿ ಶೀಘ್ರವೇ 5,263 ಪಶು ವೈದ್ಯರ ನೇಮಕ : ಸಚಿವ ಪ್ರಭು ಚವ್ಹಾಣ್ – Vishwanews24
ಬೆಳಗಾವಿ : ರಾಜ್ಯದಲ್ಲಿ ಶೀಘ್ರವೇ ಪಶು ಚಿಕಿತ್ಸಾಲಯಗಳಿಗೆ ಪಶು ವೈದ್ಯಾಧಿಕಾರಿಗಳಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕಾಂಗ್ರೆಸ್ ನ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್, ಪಶು ಚಿಕಿತ್ಸಾಲಯಗಳಿಗೆ ಪಶು ವೈದ್ಯಾಧಿಕಾರಿಗಲ ಹುದ್ದ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇಲಾಖೆ ಸಹಮತಿ ನೀಡಿದ ನಂತರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು 7,363 ಹುದ್ದೆಗಳು ಮಂಜೂರಾಗಿದ್ದು, 2100 ಹುದ್ದೆಗಳು ಭರ್ತಿ ಮಾಡಲಾಗಿದೆ. 5,263 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಪಶು ಚಿಕಿತ್ಸಾಲಯಗಳ ಕೊರತೆನೀಗಿಸಲು ಹೊಸ ಪಶು ಚಿಕಿತ್ಸಾಲಯ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
