ರಾಜ್ಯದಲ್ಲಿರುವ ವಿದ್ಯುತ್ ಆಧುನೀಕರಣ, ವಿದ್ಯುತ್ ಲೈನ್‍ಗಳ ಸುಧಾರಣೆಗೆ 8300 ಕೋಟಿ ಅನುದಾನ : ಸುನೀಲ್‍ಕುಮಾರ್ – Vishwanewws24
ರಾಜ್ಯದಲ್ಲಿರುವ ವಿದ್ಯುತ್ ಆಧುನೀಕರಣ, ವಿದ್ಯುತ್ ಲೈನ್‍ಗಳ ಸುಧಾರಣೆಗೆ 8300 ಕೋಟಿ ಅನುದಾನ : ಸುನೀಲ್‍ಕುಮಾರ್ – Vishwanewws24
ಬೆಳಗಾವಿ : ರಾಜ್ಯದಲ್ಲಿರುವ ವಿದ್ಯುತ್ ಆಧುನೀಕರಣ, ವಿದ್ಯುತ್ ಲೈನ್‍ಗಳ ಸುಧಾರಣೆ, ಉಪಕೇಂದ್ರಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರವು ಆರ್‍ಡಿಎಸ್‍ಎಸ್ ಯೋಜನೆಯಡಿ ರಾಜ್ಯಕ್ಕೆ 8300 ಕೋಟಿ ವಿಶೇಷ ಅನುದಾನವನ್ನು ನೀಡಲಿದೆ ಎಂದು ಇಂಧನ ಸಚಿವ ಸುನೀಲ್‍ಕುಮಾರ್ ವಿಧಾನಸಭೆಗೆ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಅವಿನಾಶ್ ಉಮೇಶ್ ಜಾಧವ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಆರ್‍ಡಿಎಸ್‍ಎಸ್ ಯೋಜನೆಯಡಿ ಅನುದಾನ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ. ಇದರಿಂದ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾಪು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ : vishwanews24
ಕೇಂದ್ರ ಸರ್ಕಾರವು ಆರ್‍ಡಿಎಸ್‍ಎಸ್ ಯೋಜನೆಯಡಿ ಇಷ್ಟು ದೊಡ್ಡ ಮಟ್ಟದಲ್ಲಿ ಅನುದಾನ ಬಿಡುಗಡೆ ಮಾಡುತ್ತಿರುವುದರಿಂದ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 3,999 ಕೋಟಿ ಮೊತ್ತದಲ್ಲಿ ವಿದ್ಯುತ್ ಆಧುನೀಕರಣಗೊಳಿಸಬಹುದು.
ಕಲ್ಯಾಣ ಕರ್ನಾಟಕದ 21 ಕೇಂದ್ರಗಳ 63 ಸಬ್ ಸ್ಟೇಷನ್ ಹಾಗೂ ಕಿತ್ತೂರು ಕರ್ನಾಟಕದ ಅನೇಕ ಕಡೆ ಹೊಸ ಸಬ್‍ಸ್ಟೇಷನ್‍ಗಳು, ವಿದ್ಯುತ್ ಲೈನ್‍ಗಳು ಬರಲಿವೆ ಎಂದರು. ನಮ್ಮ ಇಲಾಖೆಯ ಅಧಿಕಾರಿಗಳು ಇಂದು ದೆಹಲಿಗೆ ತೆರಳಿದ್ದು, ನಾಳೆ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಹೇಳಿದರು.
ನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ ಸ್ಯಾಂಡಲ್ ವುಡ್ ನಟರು – Vishwanews24
