ರಾಜ್ಯಪಾಲರು ವಿಶ್ವಾಸ ಮತಯಾಚನೆಗೆ ನಿರ್ದೇಶನ ನೀಡಿದ್ದು ಸರಿ ಅಲ್ಲ : ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಬಹುಮತ ಇಂದೇ ಸಾಬೀತುಪಡಿಸಿ ಎಂದ ರಾಜ್ಯಪಾಲರ ಆದೇಶ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಸಿ.ಎಂ ಕುಮಾರಸ್ವಾಮಿ ಹೇಳಿದ್ದಾರೆ.

“ವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಬೇಕು. ಹೀಗಿರುವಾಗ ರಾಜ್ಯಪಾಲರು ವಿಶ್ವಾಸ ಮತಯಾಚನೆಗೆ ನಿರ್ದೇಶನ ನೀಡಿದ್ದು ಸರಿ ಅಲ್ಲ,” ಎನ್ನುವ ಅಭಿಪ್ರಾಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ತುರ್ತಾಗಿ ವಿಚಾರಣೆ ನಡೆಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಅಧಿವೇಶನಕ್ಕೆ ಬಾರದ ಅತೃಪ್ತ ಶಾಸಕರ ಮೇಲೆ ಸದನಕ್ಕೆ ಬರಲು ಬಲವಂತಪಡಿಸುವಂತಿಲ್ಲ ಹಾಗೂ ಅವರ ವಿರುದ್ಧ ವಿಪ್ ಜಾರಿ ಮಾಡುವಂತಿಲ್ಲ ಎಂದ ಸೂಚಿಸಿದ ಸುಪ್ರೀಂಕೋರ್ಟ್. ಕೋರ್ಟ್‌ನ ಈ ಸೂಚನೆಯ ಬಗ್ಗೆ ಸ್ಪಷ್ಟೀಕರಣ ಕೇಳಲು ಸಿ.ಎಂ. ಹೆಚ್.ಡಿ.ಕೆ ಮುಂದಾಗಿದ್ದಾರೆ.

ಗುರುವಾರ ವಿಶ್ವಾಸ ಮತಯಾಚನೆ ಮೇಲೆ ನಡೆದ ಚರ್ಚೆ ವೇಳೆ ಬಿಜೆಪಿಯವರ ಒತ್ತಾಯದ ಮೇರೆಗೆ ಸದನದ ಮಧ್ಯ ಪ್ರವೇಶಿಸಿದ್ದ ರಾಜ್ಯಪಾಲರು, ಆಡಳಿತ ಪಕ್ಷವನ್ನು ಇಂದೇ ಬಹುಮತ ಸಾಬೀತುಪಡಿಸುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಿದ್ದರು. ಆದರೆ, ‘ಪಕ್ಷಾಂತರ ಕಾಯ್ದೆ, ವಿಪ್’  ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆಯಾಗಿ ತೀರ್ಮಾನ ಕೈಗೊಳ್ಳದೆ ವಿಶ್ವಾಸಮತ ಯಾಚಿಸುವುದಿಲ್ಲ. ಅಲ್ಲದೆ, ಸದನದ ಕಲಾಪದಲ್ಲಿ ಮಧ್ಯಪ್ರವೇಶಿಸುವ, ಸ್ಪೀಕರ್​ಗೆ ಆದೇಶಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ” ಎಂದು ಮೈತ್ರಿ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದರು.