ರಾಜ್ಯಸಭೆ ಕದನ: ಚುರುಕು ಪಡೆದ ಮತದಾನ ಪ್ರಕ್ರಿಯೆ – ಬಿಜೆಪಿಯ 75, ಕಾಂಗ್ರೆಸ್ನ 23, ಜೆಡಿಎಸ್ನ 7 ಶಾಸಕರಿಂದ ಮತ ಚಲಾವಣೆ – VIshwnaews24
ರಾಜ್ಯಸಭೆ ಕದನ: ಚುರುಕು ಪಡೆದ ಮತದಾನ ಪ್ರಕ್ರಿಯೆ
ಬಿಜೆಪಿಯ 75, ಕಾಂಗ್ರೆಸ್ನ 23, ಜೆಡಿಎಸ್ನ 7 ಶಾಸಕರಿಂದ ಮತ ಚಲಾವಣೆ – VIshwnaews24
ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈವರೆಗೆ 105 ಶಾಸಕರು ಮತ ಚಲಾವಣೆ ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 9ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದೆ. ಈವರೆಗೆ ಬಿಜೆಪಿಯ 75, ಕಾಂಗ್ರೆಸ್ನ 23 ಮತ್ತು ಜೆಡಿಎಸ್ನ 7 ಶಾಸಕರು ಮತದಾನ ಮಾಡಿದ್ದಾರೆ.
ರಾಜ್ಯದಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳ ಆಯ್ಕೆ ನಿರಾತಂಕವಾಗಿದೆ. ನಾಲ್ಕನೇ ಸ್ಥಾನಕ್ಕೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
Bengaluru | Karnataka CM Basavaraj Bommai casts his vote in #RajyaSabhaElection2022, at Vidhana Soudha
(Source: CMO) pic.twitter.com/oC0dRHp5Fq
— ANI (@ANI) June 10, 2022
