ಅಯೋಧ್ಯೆಯಲ್ಲಿ ರಾಮ ಮಂದಿರವೇ ನಿರ್ಮಾಣವಾಗಬೇಕು, ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣವಾಗುವುದಿಲ್ಲ; ರಾಮ ಜನ್ಮ ಭೂಮಿಯನ್ನು ಒಪ್ಪಿಕೊಂಡ ಭಾರತೀಯ ಮುಸಲ್ಮಾನರು..
ಅಯೋಧ್ಯೆ ಶ್ರೀರಾಮನ ಜನ್ಮಭೂಮಿ ಎಂಬುದು ಹಿಂದೂಗಳ ವಾದವಾದರೆ ಇದೀಗ ಮುಸ್ಲಿಂ ಸಂಘಟನೆಯೇ ಸ್ವತಃ ಈ ವಾದವನ್ನು ಒಪ್ಪಿಕೊಂಡು ರಾಮ ಮಂದಿರ ನಿರ್ಮಾಣಕ್ಕೆ ತಾವೇ ಭೂಮಿ ಕೊಡುವುದಾಗಿ ಹೇಳಿಕೊಂಡಿದ್ದಾರೆ. ಒಂದೆಡೆ ಕೋರ್ಟ್ ನಲ್ಲಿ ವಿಚಾರಣೆ ಕೂಡ ನಡೆಯುತ್ತಿದ್ದು ಹಿಂದೂಗಳ ಪರ ಮತ್ತು ಮುಸ್ಲೀಮರ ಪರ ವಾದಗಳು ನಡೆಯುತ್ತಲೇ ಇದೆ. ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಸ್ವತಃ ನ್ಯಾಯಾಲಯವೇ ಗೊಂದಲಕ್ಕೀಡಾಗಿದ್ದು, ಮುಸ್ಲಿಂ ಪರ ವಕೀಲ ರಾಜೀವ್ ಧವನ್ ಅವರು ಹೇಳಿಕೊಂಡಿರುವಂತೆ ಬಾಬರಿ ಮಸೀದಿಯನ್ನು ಕೆಡವಿದವರು ಹಿಂದೂ ತಾಲಿಬಾನಿಗಳು, ಇವರು ಬಾಬರ್‌ನ ವಿರೋಧಿಗಳು ಎಂದು ಹೇಳಿದ್ದಾರೆ.
ಆದರೆ ವಕೀಲನ ಮಾತಿಗೆ ಸ್ವತಃ ಮುಸ್ಲೀಮರೇ ಒಪ್ಪುತ್ತಿಲ್ಲ. ಯಾಕೆಂದರೆ ಅಯೋಧ್ಯೆಯಲ್ಲಿ ರಾಮ ಮಂದಿರವೇ ನಿರ್ಮಾಣವಾಗಬೇಕು, ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣವಾಗುವುದಿಲ್ಲ ಎಂದು ಮುಸ್ಲೀಮರ ಶಿಯಾ ವಕ್ಫ್ ಬೋರ್ಡ್ ಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. ರಾಮ ಮಂದಿರಕ್ಕಾಗಿ ನಾವೇ ಭೂಮಿ ಬಿಟ್ಟುಕೊಡುತ್ತೇವೆ, ಆದ್ದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರವೇ ನಿರ್ಮಾಣವಾಗಬೇಕು ಎಂದು ಕೇಳಿಕೊಂಡಿದ್ದಾರೆ..!