ರಾಮಂದಿರ ನಿರ್ಮಾಣದೊಂದಿಗೆ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ : ಬಾಬಾ ರಾಮ್‍ದೇವ್ -Vishwanews24
ಲಕ್ನೋ: ಶತಕೋಟಿ ಭಾರತೀಯರ ಶತಮಾನಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದೆ. ರಾಮಂದಿರ ನಿರ್ಮಾಣದೊಂದಿಗೆ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದು ಯೋಗಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ.
ಇಂದು ಬೆಳಗ್ಗೆ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದು ಐತಿಹಾಸಿಕ ದಿನವಾಗಿದೆ. ಈ ದಿನವನ್ನು ನಾವೆಲ್ಲರೂ ದೀರ್ಘಕಾಲ ನೆನಪಿನಟ್ಟಿಕೊಳ್ಳಬಹುದು. ರಾಮದೇವಾಲಯದ ನಿರ್ಮಾಣದೊಂದಿಗೆ ಭಾರತದಲ್ಲಿ ‘ರಾಮರಾಜ್ಯ’ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
Today is a historic day. This day will be remembered for long. I am confident that with construction of Ram Temple, 'Ram Rajya' will be established in India: Yog Guru Ramdev at Hanuman Garhi temple in #Ayodhya pic.twitter.com/ftYeZ0s5LY
— ANI UP (@ANINewsUP) August 5, 2020
