ರಾಮನ ಹೆಸರಿನಲ್ಲಿ ರಾಜಕೀಯ ನಾಟಕ ನಿಲ್ಲಿಸಿ: ಕಾಂಗ್ರೆಸ್ಗೆ ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ತಿರುಗೇಟು – vishwanews24
ರಾಮನ ಹೆಸರಿನಲ್ಲಿ ರಾಜಕೀಯ ನಾಟಕ ನಿಲ್ಲಿಸಿ: ಕಾಂಗ್ರೆಸ್ಗೆ ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ತಿರುಗೇಟು
ಶ್ರೀರಾಮ ಕಾಲ್ಪನಿಕ ಎಂದು ಕೋರ್ಟ್ಗೆ ಅಫಿದಾವಿತ್ ಸಲ್ಲಿಸಿದ ಕಾಂಗ್ರೆಸ್ನಿಂದ ಪ್ರತಿಭಟನೆಯು ರಾಜಕೀಯ ದ್ವಂದ್ವ ನೀತಿಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವರ್ಷಗಳ ಕಾಲ ಅಡ್ಡಿಪಡಿಸಿದವರು, ಶ್ರೀರಾಮನ ಅಸ್ತಿತ್ವವ ಪ್ರಶ್ನಿಸಿದವರು, ರಾಮಭಕ್ತರ ಭಾವನೆಗಳನ್ನು ನಿರಂತರವಾಗಿ ಅವಮಾನಿಸಿದವರು ಇಂದು ಕಾಪುವಿನಲ್ಲಿ ಅಯೊ ಶ್ರೀ ರಾಮನ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನವಾಗಿದೆ. ಇದು ಕಾಂಗ್ರೆಸ್ನ ರಾಜಕೀಯ ನಾಟಕವಲ್ಲದೆ ಮತ್ತೇನೂ ಅಲ್ಲ ಎಂದು ಅವರು ಹೇಳಿದ್ದಾರೆ.
ಶ್ರೀರಾಮ ಕೋಟ್ಯಾಂತರ ಭಾರತೀಯರ ಆರಾಧ್ಯ ದೈವ. ಜನರು ಕಾಂಗ್ರೆಸ್ನವರ ಮಾತುಗಳನ್ನು ನಂಬುವವರಲ್ಲ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಕಾಂಗ್ರೆಸ್ನ ಇತಿಹಾಸವನ್ನು ಕಾಪುವಿನ ನೆನಪಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಮೊದಲು ತನ್ನ ನಾಯಕರು ರಾಮ ಮಂದಿರದ ಬಗ್ಗೆ ನೀಡಿರುವ ಹೇಳಿಕೆಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣವಾಗಿರುವುದು ದೇಶದ ಕೋಟ್ಯಾಂತರ ಹಿಂದೂ ಗಳ ಶತಮಾನಗಳ ಕನಸು ನನಸಾದ ಕ್ಷಣ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗವಹಿಸದ ಕಾಂಗ್ರೆಸ್ ನಾಯ ರು ಈಗ ರಾಮ ಭಕ್ತಿಯ ಮುಖವಾಡ ಧರಿಸಿರುವುದು ಹಾಸ್ಯಾಸ್ಪದವಾಗಿದೆ.
ಕಾಪುವಿನಲ್ಲಿ ನಡೆಸಿರುವ ಪ್ರತಿಭಟನೆ ಕಾಂಗ್ರೆಸ್ ದ್ವಿಮುಖ ರಾಜಕೀಯಕ್ಕೆ ಮತ್ತೊಂದು ಸಾಕ್ಷಿ. ಜನರು ಕಾಂಗ್ರೆ ನ ಈ ನಾಟಕವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ರಾಮನ ಬಗ್ಗೆ ಕಾಂಗ್ರೆಸ್ಗೆ ಏಕಾಏಕಿ ಮೂಡಿರುವ ಪ್ರೀತಿಗೆ ಅಯೋಧ್ಯೆಯಲ್ಲಿರುವ ಶ್ರೀ ರಾಮನ ಪವಾಡವೇ ಕಾರಣ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕಾಪುವಿನಲ್ಲೂ ಅಲ್ಲದೇ ರಾಜ್ಯ ಹಾಗೂ ದೇಶದ ಜನರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಜಿತೇಂದ್ರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
