ರಾಮಮಂದಿರ ದೇಣಿಗೆ ಅವ್ಯವಹಾರ: SIT ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ : ಪೇಜಾವರ ಶ್ರೀ – vishwanews24
ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು..
ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ ಶ್ರೀ – vishwanews24
ಉಡುಪಿ : “ದೇಶ ವಿದೇಶಗಳ ಕೋಟ್ಯಂತರ ಶ್ರದ್ಧಾಳುಗಳ ಆರಾಧ್ಯ ಕೇಂದ್ರವಾಗಿರುವ ಅಯೋಧ್ಯೆಯ ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು. ನಡೆದಿದೆ ಎನ್ನಲಾದ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು” ಎಂದು ರಾಮಮಂದಿರ ವಿಶ್ವಸ್ಥ ಮಂಡಳಿ ಟ್ರಸ್ಟ್ನ ಸದಸ್ಯರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂದಿರದ ಹಗರಣದ ಕುರಿತು ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ತನಿಖೆಯ ಮೂಲಕ ಸತ್ಯಾಸತ್ಯತೆ ಶೀಘ್ರವಾಗಿ ಹೊರಬರಬೇಕು ಎಂದು ಒತ್ತಾಯಿಸಿದರು.
ಪರ್ಕಳ: ಹೆದ್ದಾರಿಯಲ್ಲಿ ಕಂಟೇನರ್ ಲಾರಿ ಪಲ್ಟಿ: ತಪ್ಪಿದ ದುರಂತ – vishwanews24
“ನಾನು ಅಯೋಧ್ಯೆಗೆ ಹೋದಾಗಲೆಲ್ಲ ಕೆಲವು ಅಗತ್ಯ ಸಲಹೆಗಳನ್ನು ನೀಡುತ್ತಿದ್ದೇನೆ. ಟ್ರಸ್ಟ್ನ ಸಭೆಗಳಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುತ್ತಿರುತ್ತೇನೆ. ಅವರೂ ಕೂಡ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಹೇಳುತ್ತಿದ್ದರು. ನಾನೇ ಅಲ್ಲಿ ಸದಾ ನಿಲ್ಲಲು ಸಾಧ್ಯವಿಲ್ಲದ ಕಾರಣ, ಹೋದಾಗ ಪರಿಶೀಲಿಸಿ ಸಲಹೆ ನೀಡಿ ಬರುತ್ತಿದ್ದೇನೆ. ವಿಶ್ವಸ್ಥ ಮಂಡಳಿ ಸದಸ್ಯನಾಗಿ ಅವರ ಮೇಲೆ ವಿಶ್ವಾಸ ಇಟ್ಟು ಸಲಹೆ ನೀಡುತ್ತಾ ಬಂದಿದ್ದೆ. ಆದರೆ, ವಿಶ್ವಸ್ಥ ಮಂಡಳಿಯಲ್ಲಿ ಇರುವವರು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳಾಗಿರಬೇಕಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ರಾಮ ಮಂದಿರಕ್ಕೆ 200 ಕೆ.ಜಿ ಬೆಳ್ಳಿ ನೀಡಿದರೂ ಟ್ರಸ್ಟ್ನಿಂದ ರಶೀದಿ ನೀಡಿಲ್ಲ ಎಂಬ ಸಿಂಧಿ ಸಮುದಾಯದ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, “ದೊಡ್ಡ ಮಟ್ಟದ ದೇಣಿಗೆ ನೀಡುವವರು ಮತ್ತು ಪಡೆದವರು ಇಬ್ಬರಿಗೂ ಜವಾಬ್ದಾರಿ ಇರುತ್ತದೆ. ದೇಣಿಗೆ ಪಡೆದ ತಕ್ಷಣವೇ ಅಲ್ಲಿಯೇ ರಶೀದಿ ತೆಗೆದುಕೊಳ್ಳಬೇಕು. ರಶೀದಿ ಕೊಟ್ಟಿಲ್ಲವಾದರೆ ಅದು ದೊಡ್ಡ ತಪ್ಪು. ಆದರೆ, ಇಂತಹ ವಿಷಯಗಳು ಕೇವಲ ಬಾಯಿ ಮಾತಿನ ಹೇಳಿಕೆಗಳಾಗಿ ಉಳಿಯಬಾರದು. ಅವರು ಆರೋಪ ಮಾಡಿರುವುದರಿಂದ ಅದರಲ್ಲಿ ವಾಸ್ತವ ಇರಬಹುದು, ಆದರೆ ರಶೀದಿ ಕೊಟ್ಟಿಲ್ಲ ಎಂಬ ಮಾತನ್ನು ಸಂಪೂರ್ಣವಾಗಿ ನಂಬಲು ಆಗುತ್ತಿಲ್ಲ” ಎಂದರು.
ಉಡುಪಿ: ಮೂವರು ರೌಡಿ ಶೀಟರ್ಗಳ ಗಡಿಪಾರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ – vishwanews24
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ರಾಜೀನಾಮೆ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ಟ್ರಸ್ಟ್ನ ಅಧಿಕೃತ ವಾಟ್ಸಾಪ್ ಗ್ರೂಪ್ನಲ್ಲಿ ಯಾವುದೇ ರೀತಿಯ ಇಂತಹ ಸಂದೇಶಗಳು ಬಂದಿಲ್ಲ. ಅವರ ವೈಯಕ್ತಿಕ ನಂಬರ್ನಿಂದಲೂ ನನಗೆ ನೇರವಾಗಿ ರಾಜೀನಾಮೆ ಕುರಿತು ಯಾವುದೇ ಮೆಸೇಜ್ ಬಂದಿಲ್ಲ. ಸಾಮಾನ್ಯವಾಗಿ ಇಂತಹ ಪ್ರಮುಖ ವಿಷಯಗಳಿದ್ದಾಗ ಅವರು ಮೆಸೇಜ್ ಮಾಡುತ್ತಿದ್ದರು. ಅಲ್ಲಿ ಸದ್ಯ ಏನು ಬೆಳವಣಿಗೆಯಾಗಿದೆ ಎಂಬುದು ನನಗೆ ಗೊತ್ತಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಆರ್ಎಸ್ಎಸ್ (RSS) ನೋಂದಣಿ ಕುರಿತ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಸಂಘಟನೆಯನ್ನು ನೋಂದಣಿ ಮಾಡಿದರೆ ಆ ಬಗ್ಗೆ ಯಾರೂ ಮಾತನಾಡಲು ಅವಕಾಶ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
