ರಾಮಮಂದಿರ ನಿರ್ಮಾಣದ ಜೊತೆಗೆ ಅಪವಿತ್ರಗೊಂಡಿರುವ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಆರಂಭ : ಯೋಗಿ ಆದಿತ್ಯನಾಥ್ – Vishwanews24
ರಾಮಮಂದಿರ ನಿರ್ಮಾಣದ ಜೊತೆಗೆ ಅಪವಿತ್ರಗೊಂಡಿರುವ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಆರಂಭ : ಯೋಗಿ ಆದಿತ್ಯನಾಥ್
ಜೈಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಜೊತೆಗೆ ಅಪವಿತ್ರಗೊಂಡಿರುವ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಆರಂಭಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ರಾಜಸ್ಥಾನದಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನದಲ್ಲಿ ನಡೆದ `ಮೂರ್ತಿ ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳನ್ನು ಪುನರ್ ಸ್ಥಾಪಿಸುವಂತೆ ಹೇಳಿದ್ದಾರೆ.
ಇದನ್ನೂ ಓದಿ:
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಆರೋಪ : ಮಂಗಳೂರು ಪೊಲೀಸ್ ಕಮಿಷನರ್ಗೆ ಲೋಕಾಯುಕ್ತ ನೋಟಿಸ್ – Vishwanews24
ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಈ ಹಿಂದೆ ನಮ್ಮ ಧಾರ್ಮಿಕ ಸ್ಥಳಗಳನ್ನ ಅಪವಿತ್ರಗೊಳಿಸಿದ್ದಾರೆ. ಆದ್ರೆ 500 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮದೊಂದಿಗೆ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದಕ್ಕೆ ಭಕ್ತರ ಕೊಡುಗೆ ಅಪಾರವಾಗಿದೆ. ಇದರೊಂದಿಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಶುರು ಮಾಡಬೇಕು ಎಂದು ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಡೀ ದೇಶ ವಾಸಿಗಳು ತಮ್ಮ ಪರಂಪರೆಯನ್ನು ಗೌರವಿಸಿ, ಉಳಿಸುವಂತೆ ಮಾಡುವ ಪ್ರತಿಜ್ಞೆ ಮಾಡಿದ್ದರು. ಅದಕ್ಕೆ 1,400 ವರ್ಷಗಳ ನಂತರ ಭಗವಾನ್ ನೀಲಕಂಠ ದೇವಾಲಯದ ಪುನರ್ ಸ್ಥಾಪನೆಯು ಉದಾಹರಣೆಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣ: ಅರಣ್ಯಾಧಿಕಾರಿಗೆ 5 ವರ್ಷ ಜೈಲು, 1.50 ಕೋ.ರೂ. ದಂಡ – Vishwanews24
